GULBARGA VARTHE

GULBARGA VARTHE

Thursday, 24 May 2018

News & photos Dt.24-05-2018

                                               ಮೇ.28 ರಿಂದ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಆಚರಣೆ

ಕಲಬುರಗಿ,ಮೇ.24.(ಕ.ವಾ.)-ಮಕ್ಕಳಿಗೆ ಮಾರಕವಾಗಿರುವ ಅತಿಸಾರ ಭೇದಿ ಕಾಯಿಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇದೇ ಮೇ 28 ರಿಂದ ಒಂದು ವಾರಗಳ ಕಾಲ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಮಾಧವರಾವ ಕೆ. ಪಾಟೀಲ ಹೇಳಿದರು.
ಅವರು ಗುರುವಾರ ಕಲಬುರಗಿಯ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜಿಲ್ಲೆಯ 5 ವರ್ಷದೊಳಗಿನ ಸುಮಾರು 3.25 ಲಕ್ಷ ಮಕ್ಕಳಿಗೆ ಗುರಿಯಾಗಿಟ್ಟುಕೊಂಡು ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಕಳೆದ ವರ್ಷ 5 ವರ್ಷದೊಳಗಿನ 787 ಮಕ್ಕಳು ಅತಿಸಾರ ಭೇದಿಯಿಂದ ಬಳಲಿದ್ದರು. ಈ ಪೈಕಿ ಯಾವುದೇ ಸಾವು ಸಂಭವಿಸಿಲ್ಲ. ಬೇದಿಯಿಂದ ಬಳಲಿದ ಒಂದು ವರ್ಷದೊಳಗಿನ 731 ಶಿಸುಗಳ ಪೈಕಿ 4 ಶಿಸುಗಳು ಸಾವಿಗೀಡಾಗಿದ್ದಾರೆ ಎಂದರು.
ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದಲ್ಲಿ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ 5 ವರ್ಷದೊಳಗಿನ ಮಕ್ಕಳು ಅತಿಸಾರ ಭೇದಿಯಿಂದ ಬಳಲದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಹಾಗು ಓ.ಆರ್.ಎಸ್. ಮತ್ತು ಝಿಂಕ್ ಮಾತ್ರೆಗಳನ್ನು ಉಪಯೋಗಿಸುವ ಕ್ರಮದ ಬಗ್ಗೆ ಜಾಗೃತಿ ಮೂಡಿಸುವರು. ಮಕ್ಕಳು ಭೇದಿಯಿಂದ ಬಳಲುತ್ತಿದ್ದರೆ ಅವರಿಗೆ ಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗುವುದು. ಪ್ರತಿಗ್ರಾಮದಲ್ಲಿ ಸಾರ್ವಜನಿಕರಿಗೆ ಓ.ಆರ್.ಎಸ್. ದ್ರಾವಣ ತಯಾರಿಕಾ ಕ್ರಮಗಳು, ವೈಯಕ್ತಿಕ ಸ್ವಚ್ಛತೆ ಹಾಗೂ ಊಟಕ್ಕೆ ಮುಂಚೆ ಕೈ ತೊಳೆಯುವ ಕ್ರಮಗಳ ಬಗ್ಗೆ ತಿಳಿಹೇಳಲಾಗುವುದು ಎಂದರು.
ಮಕ್ಕಳ ಸಾವಿಗೆ ನಿರ್ಜಲೀಕರಣ ಪ್ರಮುಖ ಕಾರಣವಾಗಿದೆ. ಅತಿಸಾರ ಭೇದಿಯಿಂದ ಪೀಡಿತವಾಗುವ ಮಗುವಿಗೆ ಮೇಲಿಂದ ಮೇಲೆ ಓ.ಆರ್.ಎಸ್. ದ್ರಾವಣ ಕುಡಿಸುವ ಮೂಲಕ ನಿರ್ಜಲೀಕರಣ ತಡೆಗಟ್ಟಬಹುದು. ಜಿಲ್ಲೆಯ ಎಲ್ಲ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮೂದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಓ.ಆರ್.ಟಿ. ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ದೈಹಿಕ ಶಿಕ್ಷಕ ಹಾಗೂ ಆರೋಗ್ಯ ಕಾರ್ಯಕರ್ತರ ಮೂಲಕ ಎಲ್ಲ ಶಾಲಾ ಮಕ್ಕಳಿಗೆ ಊಟಕ್ಕೂ ಮುಂಚೆ ಸ್ವಚ್ಛವಾಗಿ ಕೈತೊಳೆಯುವ ಮಾದರಿಗಳನ್ನು ರೂಢಿ ಮಾಡಿಸಲಾಗುವುದು. ಶಾಲೆಗಳಲ್ಲಿರುವ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಲು ಕ್ರಮ ಜರುಗಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲ ನೀರು ಸಂಗ್ರಹಾಗಾರಗಳನ್ನು ಸ್ವಚ್ಛಗೊಳಿಸಲು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ನಿಫಾ ವೈರಸ್- ಕಲಬುರಗಿ ಜಿಲ್ಲೆಯಲ್ಲಿ ನಿಫಾ ವೈರಸ್ ತಗುಲಿದ ಪ್ರಕರಣಗಳು ಇಲ್ಲಿಯವರೆಗೆ ಕಂಡುಬಂದಿಲ್ಲ ಕಾರಣ ಈ ಜಿಲ್ಲೆಯಲ್ಲಿ ನಿಫಾ ಸೋಂಕು ತಗಲುವ ಯಾವುದೇ ಆತಂಕಗಳು ಇಲ್ಲ. ಮುಂಜಾಗ್ರತಾ ಕ್ರಮವಾಗಿ ಕೇರಳ ಮತ್ತು ಮಂಗಳೂರಿನಿಂದ ಆಗಮಿಸುವ ಪ್ರಯಾಣಿಕರಿಗೆ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸಾರ್ವಜನಿಕರು ಸ್ವಲ್ಪ ದಿನಗಳ ಮಟ್ಟಿಗೆ ಕೇರಳ ಮತ್ತು ಮಂಗಳೂರಿಗೆ ಪ್ರಯಾಣಿಸುವಲ್ಲಿ ಮುಂಜಾಗ್ರತೆ ವಹಿಸಬೇಕು. ಜಿಲ್ಲೆಯಲ್ಲಿ ಹಲವು ಕಚೇರಿಗಳಲ್ಲಿ ಕೇರಳದ ಸಿಬ್ಬಂದಿಗಳಿದ್ದು, ಅವರು ಕೇರಳಕ್ಕೆ ಹೋಗಿ ಬಂದಿದ್ದರೆ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ಕೈಗೊಂಡು ಚಿಕಿತ್ಸೆ ಪಡೆಯುವುದು ಸೂಕ್ತ. ಶಂಕಿತ ನಿಫಾ ವೈರಸ್ ತಗುಲಿದ ಪ್ರಕರಣಗಳನ್ನು ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಯಲ್ಲಿ 5 ಹಾಸಿಗೆಯ ಪ್ರತ್ಯೇಕ ವಾರ್ಡ ಪ್ರಾರಂಭಿಸುವಂತೆ ಜಿಲ್ಲಾ ಆಸ್ಪತ್ರೆಗೆ ತಿಳಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್.ಸಿ.ಎಚ್. ವೈದ್ಯಾಧಿಕಾರಿ ಡಾ|| ಅಂಬಾರಾಯ. ಎಸ್. ರುದ್ರವಾಡಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿರೇಶ, ಜಿಲ್ಲಾ ಸುಶ್ರೂಷಕ ಅಧಿಕಾರಿ ಪದ್ಮಿನಿ ಕಿರಣಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಶೈಲ ದಿವಟಗಿ ಹಾಜರಿದ್ದರು.

                                            ಮೇ.26ರಂದು ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಜಾಥಾ

ಕಲಬುರಗಿ,ಮೇ.24.(ಕ.ವಾ.)-ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಇದೇ ಮೇ 26 ರಂದು ಬೆಳಗಿನ 8 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಜಗತ್ ವೃತ್ತ ಮಾರ್ಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿವರೆಗೆ ಜಾಥಾ ಹಮ್ಮಿಕೊಳ್ಳಳಾಗಿದೆ.
ಜಿಲ್ಲಾ ಆಸ್ಪತ್ರೆ ಶಸ್ತ್ರಜ್ಞ ಹಾಗೂ ಅಧೀಕ್ಷಕ ಡಾ|| ಬಾಲಚಂದ್ರ ಜೋಶಿ ಜಾಥಾ ಉದ್ಘಾಟಿಸುವರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಮಾಧವರಾವ ಕೆ. ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಲ್ಲಾ ವಿ.ಬಿ.ಡಿ. ನಿಯಂತ್ರಣ ಅಧಿಕಾರಿ ಡಾ|| ಬಸವರಾಜ ಗುಳಗಿ ಅಧ್ಯಕ್ಷತೆ ವಹಿಸುವರು. 

                                               ವಾರ್ಷಿಕ ಲೆಕ್ಕಪತ್ರ ಸಲ್ಲಿಸಲು ವಕ್ಫ್ ಸಂಸ್ಥೆಗಳಿಗೆ ಸೂಚನೆ

ಕಲಬುರಗಿ,ಮೇ.24.(ಕ.ವಾ.)- ವಕ್ಫ್ ಕಾಯ್ದೆ-1995 ಹಾಗೂ ತಿದ್ದುಪಡಿ ಕಾಯ್ದೆ-2013ರ ನಿಯಮ 46ರ ಪ್ರಕಾರ ಕಲಬುರಗಿ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳ ಮುತುವಲ್ಲಿ, ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ತಮ್ಮ ವಕ್ಫ್ ಸಂಸ್ಥೆಯ 2017-18ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ನಮೂನೆ-90 ಹಾಗೂ ಬಜೆಟ್ ಎಸ್ಟಿಮೇಟನ್ನು ನಮೂನೆ-72ರಲ್ಲಿ ಮತ್ತು ವಾರ್ಷಿಕ ವಂತಿಗೆ ಮೊತ್ತವನ್ನು ತಕ್ಷಣ ಜಿಲ್ಲಾ ವಕ್ಫ್ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾ ವಕ್ಫ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಕೆಲ ವಕ್ಫ್ ಸಂಸ್ಥೆಗಳು ಸುಮಾರು ವರ್ಷಗಳಿಂದ ಬಜೆಟ್ ಎಸ್ಟಿಮೆಟ್, ವಾರ್ಷಿಕ ಲೆಕ್ಕಪತ್ರ ಮತ್ತು ವಾರ್ಷಿಕ ವಂತಿಗೆಯನ್ನು ವಕ್ಫ್ ಮಂಡಳಿಗೆ ಸಲ್ಲಿಸದಿರುವುದು ವಕ್ಫ್ ಕಾಯ್ದೆ-1995ರ ಕಾಯ್ದೆ 44, 46, 72 ಮತ್ತು 50ರ ಸ್ಪಷ್ಟ  ಉಲ್ಲಂಘನೆಯಾಗಿರುತ್ತದೆ. ವಕ್ಫ್ ಸಂಸ್ಥೆಯ ವಾರ್ಷಿಕ ಲೆಕ್ಕಪತ್ರ, ಬಜೆಟ್ ಅಂದಾಜು ಮತ್ತು ವಂತಿಗೆಯನ್ನು ಸಲ್ಲಿಸುವುದು ಸಂಸ್ಥೆಯ ಮುತ್ತುವಲ್ಲಿ, ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಕರ್ತವ್ಯವಾಗಿದ್ದು, ತಪ್ಪಿದಲ್ಲಿ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದಲ್ಲದೇ ಜಿಲ್ಲೆಯ ಎಲ್ಲ ವಕ್ಫ್ ಸಂಸ್ಥೆಗಳು 2018-19ನೇ ಸಾಲಿನ ವಾರ್ಷಿಕ ಬಜೆಟ್ ಎಸ್ಟಿಮೆಟ್ ಹಾಗೂ ವಕ್ಫ್ ವಂತಿಗೆಯನ್ನು ಸಹ ಕೂಡಲೇ ಸಲ್ಲಿಸುವಂತೆ ತಿಳಿಸಲಾಗಿದೆ.
     ಜಿಲ್ಲೆಯ ಹಲವಾರು ವಕ್ಫ್ ಸಂಸ್ಥೆಗಳಿಗೆ ವಕ್ಫ್ ಆಸ್ತಿಯ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕಾಗಿ ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗಿದ್ದು, ಅದಕ್ಕೆ ಹಣ ಬಳಕೆ ಪ್ರಮಾಣಪತ್ರವನ್ನು ವಕ್ಫ್ ಸಂಸ್ಥೆಗಳು ಇದೂವರೆಗೆ ಸಲ್ಲಿಸಿರುವುದಿಲ್ಲ. ವಕ್ಫ್ ಸಂಸ್ಥೆಗಳು ಅನುದಾನ ಬಳಕೆ ಪ್ರಮಾಣಪತ್ರವನ್ನು ವಕ್ಫ್ ಮಂಡಳಿಗೆ ಸಲ್ಲಿಸುವುದು ಕಡ್ಡಾಯವಾಗಿದ್ದು, ಕೂಡಲೇ ಪ್ರಮಾಣಪತ್ರವನ್ನು ಕಲಬುರಗಿ ಜಿಲ್ಲಾ ವಕ್ಫ್ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

                                                   ಸೇಡಂ ಐ.ಟಿ.ಐ.: ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

 ಕಲಬುರಗಿ,ಮೇ.24.(ಕ.ವಾ.)-ಸೇಡಂ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2018-19ನೇ ಸಾಲಿಗೆ ಎಸ್.ಸಿ.ವಿ.ಟಿ ಅಡಿಯಲ್ಲಿ ಫಿಟ್ಟರ್ ಮತ್ತು ಎಲೆಕ್ಟ್ರಿಷಿಯನ್ ವೃತ್ತಿಗಳ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ಪಾಸಾದ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸೇಡಂ ಐ.ಟಿ.ಐ. ಕಾಲೇಜಿನ ಪ್ರಾಚಾರ್ಯ ಮಲ್ಲಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್ www.emptrg.kar.nic.inರ ಮೂಲಕ ಜೂನ್ 8 ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು,  ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ  9900634282, 9845950013ನ್ನು ಸಂಪರ್ಕಿಸಲು ಕೋರಲಾಗಿದೆ.

                               ಚಿಂಚೋಳಿ, ಕುಂಚಾವರಂ ಐ.ಟಿ.ಐ. ಕಾಲೇಜಿನಲ್ಲಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

 ಕಲಬುರಗಿ,ಮೇ.24.(ಕ.ವಾ.)-ಜಿಲ್ಲೆಯ ಚಿಂಚೋಳಿ ಮತ್ತು ಚಿಂಚೋಳಿ ತಾಲೂಕಿನ ಕುಂಚಾವರಂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2018-19ನೇ ಸಾಲಿಗೆ ಎಸ್.ಸಿ.ವಿ.ಟಿ ಅಡಿಯಲ್ಲಿ ಫಿಟ್ಟರ್ ಮತ್ತು ಎಲೆಕ್ಟ್ರಿಷಿಯನ್ ವೃತ್ತಿಗಳ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ಪಾಸಾದ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಚಿಂಚೋಳಿ ಮತ್ತು ಕುಂಚಾವರಂ ಐ.ಟಿ.ಐ. ಕಾಲೇಜಿನ ಪ್ರಾಚಾರ್ಯ ಗಣಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್ www.emptrg.kar.nic.inರ ಮೂಲಕ ಜೂನ್ 8 ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು,  ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ  9980630233ನ್ನು ಸಂಪರ್ಕಿಸಲು ಕೋರಲಾಗಿದೆ.

                        ಅಂಗನವಾಡಿ ಕಾರ್ಯಕರ್ತೆಯರ-ಸಹಾಯಕೀಯರ ತಾತ್ಮಲಿಕ ಆಯ್ಕೆ ಪಟ್ಟಿ ಪ್ರಕಟ:
                                                             ಆಕ್ಷೇಪಣೆ ಸಲ್ಲಿಸಲು ಸೂಚನೆ

 ಕಲಬುರಗಿ,ಮೇ.24.(ಕ.ವಾ.)-ಕಲಬುರಗಿ ಜಿಲ್ಲೆಯ ಚಿತ್ತಾಪುರ ಮತ್ತು ಶಹಾಬಾದ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ/ ಸಹಾಯಕಿಯರ ಗೌರವಧನದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಚಿತ್ತಾಪುರ ಮತ್ತು ಶಹಾಬಾದ ಸಿ.ಡಿ.ಪಿ.ಓ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, ಆಯ್ಕೆ ಪಟ್ಟಿಗೆ ಯಾರಾದರು ಆಕ್ಷೇಪಣೆ ಸಲ್ಲಿಸಲು ಬಯಸಿದ್ದಲ್ಲಿ ದಿ:31-05-2018ರೊಳಗೆ ಲಿಖಿತ ರೂಪದಲ್ಲಿ ಆಯಾ ಸಿ.ಡಿ.ಪಿ.ಓ ಕಚೇರಿಗೆ ಸಲ್ಲಿಸುವಂತೆ ಚಿತ್ತಾಪುರ ಮತ್ತು ಶಹಾಬಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರತ್ಯೇಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ/ ಸಹಾಯಕೀಯರ ಹುದ್ದೆಗಳು ಗೌರವಧನದ ಹುದ್ದೆಗಳಾಗಿದ್ದು, ಸರ್ಕಾರಿ ನಿಯಮಾವಳಿಯನ್ವಯ ಅಭ್ಯರ್ಥಿಗಳು ಸಲ್ಲಿಸಿರುವ ಶೈಕ್ಷಣಿಕ ದಾಖಲಾತಿಗಳ ಆಧಾರದ ಮೇಲೆ ತಾತ್ಮಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಅವಧಿ ಮೀರಿ ಬರುವ ಆಕ್ಷೇಪಣೆಗಳನ್ನು ಪುರಸ್ಕರಿಸಲಾಗುವುದಿಲ್ಲ ಎಂದ ಅವರು ಸ್ಪಷ್ಠಪಡಿಸಿದ್ದಾರೆ.
ಇನ್ನು ತಾತ್ಕಾಲಿಕವಾಗಿ ಆಯ್ಕೆಯಾದ ಚಿತ್ತಾಪುರ ಹಾಗೂ ಶಹಾಬಾದ ತಾಲೂಕಿನ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ದಾಖಲೆಗಳನ್ನು ಪರಿಶೀಲನೆಗೆ ಸಂಬಂಧಿಸಿದ  ಸಿ.ಡಿ.ಪಿ.ಓ ಕಛೇರಿಗೆ ದಿನಾಂಕ: 31.05.2018ರ ಒಳಗಾಗಿ ಸಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ/ ಸಹಾಯಕೀಯರ ಆಯ್ಕೆ ಸಮಿತಿ ಸದಸ್ಯ ಕಾರ್ಯದರ್ಶಿಗಳಾಗಿರುವ ಚಿತ್ತಾಪುರ ಮತ್ತು ಶಹಾಬಾದ ಸಿ.ಡಿ.ಪಿ.ಓ ಅವರು ತಿಳಿಸಿದ್ದಾರೆ.

                                             6ನೇ ತರಗತಿ ಪ್ರವೇಶಕ್ಕಾಗಿ ಜೂನ್ 9 ರಿಂದ ಕೌನ್ಸಿಲಿಂಗ್

ಕಲಬುರಗಿ,ಮೇ.24.(ಕ.ವಾ.)-ಕಲಬುರಗಿ ಜಿಲ್ಲೆಯ ಮೋರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 2018-19ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ನಡೆಸಲಾದ ಪ್ರವೇಶ ಪರೀಕ್ಷೆಯ ಕಟ್ ಆಫ್ ಅಂಕ ಪ್ರಕಟಿಸಲಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜೂನ್ 9 ರಿಂದ 13ರ ವರೆಗೆ ಕಲಬುರಗಿ ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿರುವ ಕನ್ನಡ ಭವನದಲ್ಲಿ ಕೌನ್ಸಿಲಿಂಗ್ ನಡೆಸಲಾಗುವುದೆಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಇಲಾಖೆಯ ವೆಬ್ ಸೈಟ್ www.kries.kar.nic.inನಲ್ಲಿ ವೀಕ್ಷಿಸಬಹುದಾಗಿದೆ. ಕೌನ್ಸಿಲಿಂಗ್ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳು ಜೂನ್ 9 ರಿಂದ 13ರ ವರೆಗೆ ಬೆಳಿಗ್ಗೆ 10 ರಿಂದ ಸಾಯಂಕಾಲ 6 ಗಂಟೆ ವರೆಗೆ ಕೌನ್ಸಿಲಿಂಗ್ ನಡೆಯುವ ಸ್ಥಳದಲ್ಲಿ ತಮ್ಮ ಪಾಲಕರೊಂದಿಗೆ ಹಾಜರಿರುವಂತೆ ತಿಳುವಳಿಕೆ ಪತ್ರ ಅಂಚೆ ಮೂಲಕ ರವಾನಿಸಲಾಗಿದೆ. ತಿಳುವಳಿಕೆ ಪತ್ರ ತಲುಪದೆ ಇದ್ದಲ್ಲಿ ಅರ್ಹ ವಿದ್ಯಾರ್ಥಿಗಳು ಹಾಲ್ ಟಿಕೆಟ್ ಮತ್ತು ಮೂಲ ದಾಖಲೆಯೊಂದಿಗೆ ಕೌನ್ಸಿಲಿಂಗ್ ಸ್ಥಳಕ್ಕೆ ಹಾಜರಾಗತಕ್ಕದ್ದು.
ಜೂನ್ 13 ರಂದು ಹೆಚ್ಚುವರಿ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳಿಗೆ ಪ್ರವರ್ಗವಾರು ಸ್ಥಾನಗಳು ಲಭ್ಯವಿದ್ದಲ್ಲಿ ಪ್ರವೇಶಾತಿಗೆ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರವರ್ಗವಾರು ಕಟ್ ಆಫ್ ಅಂಕಗಳ ವಿವರ: ಪರಿಶಿಷ್ಠ ಜಾತಿ (ಗಂಡು-43, ಹೆಣ್ಣು-29), ಪರಿಶಿಷ್ಠ ಪಂಗಡ (ಗಂಡು-05, ಹೆಣ್ಣು-07), ಪ್ರವರ್ಗ-1 (ಗಂಡು-70, ಹೆಣ್ಣು-66), ಪ್ರವರ್ಗ-2ಎ (ಗಂಡು-69, ಹೆಣ್ಣು-62), ಪ್ರವರ್ಗ-2ಬಿ (ಗಂಡು-57, ಹೆಣ್ಣು-56), ಪ್ರವರ್ಗ-3ಎ (ಗಂಡು-53, ಹೆಣ್ಣು-56), ಪ್ರವರ್ಗ-3ಬಿ (ಗಂಡು-73, ಹೆಣ್ಣು-71) ಮತ್ತು ಸಾಮಾನ್ಯ ವರ್ಗ (ಗಂಡು-ಇಲ್ಲ, ಹೆಣ್ಣು-82).
ಪ್ರವರ್ಗವಾರು ವೇಟಿಂಗ್ ಲಿಸ್ಟ ಅಂಕಗಳ ವಿವರ: ಪರಿಶಿಷ್ಠ ಜಾತಿ (ಗಂಡು-37, ಹೆಣ್ಣು-22), ಪರಿಶಿಷ್ಠ ಪಂಗಡ (ಗಂಡು-00, ಹೆಣ್ಣು-00), ಪ್ರವರ್ಗ-1 (ಗಂಡು-67, ಹೆಣ್ಣು-63), ಪ್ರವರ್ಗ-2ಎ (ಗಂಡು-66, ಹೆಣ್ಣು-57), ಪ್ರವರ್ಗ-2ಬಿ (ಗಂಡು-54, ಹೆಣ್ಣು-47), ಪ್ರವರ್ಗ-3ಎ (ಗಂಡು-49, ಹೆಣ್ಣು-45), ಪ್ರವರ್ಗ-3ಬಿ (ಗಂಡು-70, ಹೆಣ್ಣು-68) ಮತ್ತು ಸಾಮಾನ್ಯ ವರ್ಗ (ಗಂಡು-ಇಲ್ಲ, ಹೆಣ್ಣು-ಇಲ್ಲ).


                                               Wednesday, 23 May 2018

News and Photo Date: 23--05--2018

ಪ್ರಾದೇಶಿಕ ಆಯುಕ್ತರಾಗಿ ಪಂಕಜಕುಮಾರ ಪಾಂಡೆ ಅಧಿಕಾರ ಸ್ವೀಕಾರ
**************************************************************
ಕಲಬುರಗಿ,ಮೇ.23.(ಕ.ವಾ.)-ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಪಂಕಜಕುಮಾರ ಪಾಂಡೆ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ಈ ಹಿಂದಿನ ಪ್ರಾದೇಶಿಕ ಆಯುಕ್ತರಾಗಿದ್ದ ಹರ್ಷ ಗುಪ್ತಾ ಅವರು ಉನ್ನತ ಅಧ್ಯಯನಕ್ಕಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಯಕ್ಕೆ ನಿಯೋಜಿಸಲಾಗಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳಾದ ಆರ್. ವೆಂಕಟೇಶಕುಮಾರ ಅವರನ್ನು ಪ್ರಾದೇಶಿಕ ಆಯುಕ್ತರನ್ನಾಗಿ ನೇಮಿಸಲಾಗಿತ್ತು.
ಹಿರಿಯ ಐಎಎಸ್ ಅಧಿಕಾರಿ ಪಂಕಜಕುಮಾರ ಪಾಂಡೆ ಅವರು ಈ ಹಿಂದೆ 2005 ರಿಂದ 2008ರವರೆಗೆ ಕಲಬುರಗಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಬಿ.ಎಂ.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆ. ಕಲಬುರಗಿ ಪ್ರಾದೇಶಿಕ ಆಯುಕ್ತರ ಹುದ್ದೆಯ ಜೊತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿಯಾಗಿಯೂ ಮುಂದುವರೆಯಲಿದ್ದಾರೆ.
ಇಂದ್ರಧನುಷ ಲಸಿಕಾ ಅಭಿಯಾನಕ್ಕೆ ಚಾಲನೆ
***************************************
ಕಲಬುರಗಿ,ಮೇ.23.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಗ್ರಾಮ ಸ್ವರಾಜ ಅಭಿಯಾನದೊಂದಿಗೆ ತೀವ್ರಗೊಂಡ ಇಂದ್ರಧನುಷ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಪೊಲಿಯೋ ಲಸಿಕೆ ಹಾಕುವ ಮೂಲಕ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಕಲಬುರಗಿ ತಾಲೂಕಿನ ಸಣ್ಣೂರ ಗ್ರಾಮದಲ್ಲಿ ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಗುವನ್ನು ಹಾಗೂ ಗರ್ಭಿಣಿಯರನ್ನು ರೋಗಗಳಿಂದ ರಕ್ಷಿಸಬೇಕಾದರೆ ಸಂಪೂರ್ಣ ಲಸಿಕೆ ನೀಡುವುದು ಅವಶ್ಯಕ. ಮಕ್ಕಳು ಹುಟ್ಟಿದ ತಕ್ಷಣ ಪೊಲಿಯೋ, ಹೆಪಟೈಟಿಸ್ ಮತ್ತು ಬಿಸಿಜಿ ಲಸಿಕೆಯನ್ನು ಹಾಕಿಸಬೇಕು. ಒಂದುವರೆ ತಿಂಗಳ ಅಂತರದಲ್ಲಿ ಪೆಂಟಾ ವ್ಯಾಕ್ಸಿನ್ ಹಾಗೂ ಇಂಜೆಕ್ಟಿಬಲ್ ಪೊಲಿಯೋ ವ್ಯಾಕ್ಸಿನ್, ಮೂರು ತಿಂಗಳ ಒಳಗಾಗಿ ಪೆಂಟಾ ವ್ಯಾಕ್ಸಿನ್ ಎರಡನೇ ಡೋಸ್ ಹಾಗೂ 9 ತಿಂಗಳ ಒಳಗಾಗಿ ಪೆಂಟಾ ವ್ಯಾಕ್ಸಿನ್ ಮೂರನೇ ಡೋಸ್ ಮತ್ತು ಇಂಜೆಕ್ಟಿಬಲ್ ಪೊಲಿಯೋ ವ್ಯಾಕ್ಸಿನ್ ಎರಡನೇ ಡೋಸ್ ಕೊಡಿಸಬೇಕು. 9ನೇ ತಿಂಗಳಿಗೆ ಮಿಸಲ್ಸ್ ರುಬೆಲ್ಲಾ ವ್ಯಾಕ್ಸಿನ್ ಲಸಿಕೆ ಹಾಗೂ 14 ರಿಂದ 16 ತಿಂಗಳ ಒಳಗಾಗಿ ಡಿಪಿಟಿ ಬುಸ್ಟರ್ ಡೋಸ್, 24 ತಿಂಗಳ ನಂತರ ಎರಡನೇ ಡಿಪಿಟಿ ಬುಸ್ಟರ್ ಡೋಸ್ ಮತ್ತು 5-6 ವರ್ಷದೊಳಗಾಗಿ ಡಿಪಿಟಿ ಬುಸ್ಟರ್ ಡೋಸ್ ಲಸಿಕೆ ಹಾಕಿಸಬೇಕು. ಆಗ ಮಾತ್ರ ಮಕ್ಕಳು ಸಂಪೂರ್ಣವಾಗಿ ಲಸಿಕೆ ಪಡೆದಂತಾಗುತ್ತದೆ. ಪಾಲಕರು ಒಂದೆರಡು ಬಾರಿ ಲಸಿಕೆ ಕೊಡಿಸಿ ಮುಂದೆ ನಿಲ್ಲಿಸಬಾರದು ಎಂದು ಹೇಳಿದರು.
ಗ್ರಾಮಮಟ್ಟದಲ್ಲಿರುವ ಅಂಗನವಾಡಿ, ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಮಕ್ಕಳ ಮತ್ತು ಗರ್ಭಿಣಿಯರ ಲಸಿಕಾ ಕಾರ್ಡುಗಳ ಅನ್ವಯ ಅವರನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಸಂಪೂರ್ಣ ಲಸಿಕೆ ಕೊಡಿಸಬೇಕು. ಗರ್ಭಿಣಿ ಮತ್ತು ಮಕ್ಕಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಅಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಲಸಿಕೆ ನೀಡಲಾಗುವುದು. ಲಸಿಕೆಯಿಂದ ವಂಚಿತರಾಗಿರುವ ಮಕ್ಕಳು ಮತ್ತು ಗರ್ಭಿಣಿಯರಿಗೆ ಸಂಪೂರ್ಣ ಲಸಿಕೆ ನೀಡಲು ಜಿಲ್ಲೆಯ 67 ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ಆಂದೋಲನ ಮಾದರಿಯಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಸೂಚಿಸಿದರು.
ಗ್ರಾಮ ಸ್ವರಾಜ ಅಭಿಯಾನದ ಜೊತೆಗೆ ಇಂದ್ರಧನುಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲು ಕೇಂದ್ರ ಸರ್ಕಾರವು ರಾಜ್ಯದ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳನ್ನು ಹೊರುತು ಪಡಿಸಿ 28 ಜಿಲ್ಲೆಗಳಲ್ಲಿ 625 ಗ್ರಾಮಗಳನ್ನು ಆಯ್ಕೆ ಮಾಡಿದೆ. ಕಲಬುರಗಿ ಜಿಲ್ಲೆಯ 7 ತಾಲೂಕುಗಳ 67 ಗಾಮಗಳಲ್ಲಿರುವ ಲಸಿಕಾ ವಂಚಿತ 27 ಗರ್ಭಿಣಿಯರಿಗೆ, ಎರಡು ವರ್ಷದೊಳಗಿನ 211 ಹಾಗೂ ಐದರಿಂದ ಆರು ವರ್ಷದೊಳಗಿನ 884 ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ತೀವ್ರಗೊಂಡ ಇಂದ್ರಧನುಷ ಅಭಿಯಾನವನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹೊರುತುಪಡಿಸಿ ಮೇ ತಿಂಗಳ 23,25,26 ರಂದು, ಜೂನ ತಿಂಗಳ 20,22,23 ರಂದು ಮತ್ತು ಜುಲೈ ತಿಂಗಳ 18,20,21 ರಂದು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಮಾಧವರಾವ ಕೆ ಪಾಟೀಲ್, ಆರ್.ಸಿ.ಎಚ್. ವೈದ್ಯಾಧಿಕಾರಿ ಡಾ|| ಎ.ಎಸ್.ರುದ್ರವಾಡಿ, ಸರ್ವಲನ್ಸ್ ವೈದ್ಯಾಧಿಕಾರಿ ಡಾ. ಅನೀಲಕುಮಾರ ತಾಳಿಕೋಟಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಿವಶರಣಪ್ಪ, ತಾಲೂಕು ವೈದ್ಯಾಧಿಕಾರಿ ಡಾ. ರಾಜಕುಮಾರ ಕೆ., ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ವಿ. ರಾಮನ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಇಲಾಖಾ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
***********************************************
ಕಲಬುರಗಿ,ಮೇ.23.(ಕ.ವಾ.)-ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸಲಾಗುತ್ತಿರುವ 2018ನೇ ಸಾಲಿನ ಪ್ರಥಮ ಅಧಿವೇಶನ ಇಲಾಖಾ ಪರೀಕ್ಷೆಯು ಮೇ 23 ರಿಂದ 31ರವರೆಗೆ ಪರೀಕ್ಷಾ ಉಪ ಕೇಂದ್ರಗಳಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 1 ರಿಂದ ಸಂಜೆ 4 ಗಂಟೆಯವರೆಗೆ ಜರುಗಲಿದೆ.
ಅಕ್ರಮ ಮತ್ತು ನಕಲು ಅವ್ಯವಹಾರ ತಡೆಯಲು ಹಾಗೂ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ 200 ಮೀಟರ್ ಪ್ರದೇಶÀದಲ್ಲಿ 1973ರ ಸಿಆರ್.ಪಿ.ಸಿ. ಕಾಯ್ದೆಯ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿರಾಕ್ಸ್/ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಧರಣಿ ಮತ್ತು ಮೆರವಣಿಗೆ ನಡೆಸಬಾರದೆಂದು ಕಲಬುರಗಿ ತಹಸೀಲ್ದಾರ್ ಜಗನ್ನಾಥ ಪೂಜಾರಿ ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೋಣೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಮೊಬೈಲ್ ಹಾಗೂ ಇತರೆ ಚಿಕ್ಕ ಎಲೆಕ್ಟ್ರಾನಿಕ್ಸ್ ವಸ್ತು, ಬ್ಲ್ಯೂತೂಟ ಮತ್ತು ಚಿಕ್ಕ ಗಾತ್ರದ ಪುಸ್ತಕಗಳನ್ನು ಸೇರಿದಂತೆ ಮತ್ತಿತರ ಯಾವುದೇ ವಸ್ತುಗಳನ್ನು ತರಕೂಡದು ಎಂದು ಸೂಚಿಸಿದ್ದಾರೆ.
ಚಿತ್ತಾಪುರ: ಐ.ಟಿ.ಐ. ಪ್ರವೇಶಕ್ಕೆ ಅರ್ಜಿ ಆಹ್ವಾನ
********************************************
ಕಲಬುರಗಿ,ಮೇ.23.(ಕ.ವಾ.)-ಕಲಬುರಗಿ ಜಿಲ್ಲೆಯ ಚಿತ್ತಾಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2018-19ನೇ ಸಾಲಿನ ತರಬೇತಿಗೆ ಎಸ್.ಸಿ.ವಿ.ಟಿ. ಯೋಜನೆಯಡಿ ಲಭ್ಯವಿರುವ ಫಿಟ್ಟರ್-21 ಹಾಗೂ ಎಲೆಕ್ಟ್ರಿಷಿಯನ್-21 ವೃತ್ತಿಗಳ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ. ಪಾಸಾದ ಅಭ್ಯರ್ಥಿಗಳು ಇಲಾಖೆಯ ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 8 ಕೊನೆಯ ದಿನಾಂಕ ಇರುತ್ತದೆ. ವಿದ್ಯಾರ್ಥಿಗಳು ಹತ್ತಿರದ ಯಾವುದೇ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಥವಾ ಇಂಟರ್‍ನೆಂಟ್ ಕಫೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಸಂಸ್ಥೆಯ ಪ್ರಾಚಾರ್ಯ ಭೀಮಾಶಂಕರ ಹೊರಕೇರಿ ಅವರ ಮೊಬೈಲ್ ಸಂ. 9740353318ನ್ನು ಸಂಪರ್ಕಿಸಲು ಕೋರಲಾಗಿದೆ.
ಸ್ಟೇಷನ್ ಗಾಣಗಾಪುರ: ಐ.ಟಿ.ಐ. ಪ್ರವೇಶಕ್ಕೆ ಅರ್ಜಿ ಆಹ್ವಾನ
****************************************************
ಕಲಬುರಗಿ,ಮೇ.23.(ಕ.ವಾ.)-ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2018-19ನೇ ಸಾಲಿಗೆ ಎಸ್.ಸಿ.ವಿ.ಟಿ. ಯೋಜನೆಯಡಿ ಕೆಳಕಂಡ 6 ವೃತ್ತಿಗಳ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ಪಾಸಾದ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಎಲೆಕ್ಟ್ರಿಷಿಯನ್-21, ಎಲೆಕ್ಟ್ರಾನಿಕ್ ಮೆಕ್ಯಾನಿಕ್-26, ಫಿಟ್ಟರ್-21, ಟರ್ನರ್-16, ಮೆಕ್ಯಾನಿಕ್ ಮೋಟಾರ ವಹಿಕಲ್ (ಎಂಎಂವಿ)-21 ಹಾಗೂ ಮೆಕ್ಯಾನಿಕ್ ರೆಫ್ರಿಜರೇಟರ್ ಆಂಡ್ ಏರ್ ಕಂಡಿಶನಿಂಗ್ (ಎಂಆರ್ ಆಂಡ್ ಎಸಿ)-26 ವೃತ್ತಿಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್ ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ ಮತ್ತು ತಿತಿತಿ.ಜeಣಞಚಿಡಿಟಿಚಿಣಚಿಞಚಿ.oಡಿg.iಟಿರ ಮೂಲಕ ಜೂನ್ 8ರ ಸಂಜೆ 4 ಗಂಟೆಯೊಳಗಾಗಿ ಸಲ್ಲಿಸಬೇಕು.
ವಿದ್ಯಾರ್ಥಿಗಳು ಹತ್ತಿರದ ಯಾವುದೇ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಥವಾ ಇಂಟರ್‍ನೆಂಟ್ ಬ್ರೌಸಿಂಗ್ ಸೆಂಟರ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳಾದ ಮಲ್ಲಪ್ಪ ಜಮಾದಾರ ಮೊಬೈಲ್ ಸಂಖ್ಯೆ 9972876330, ಮಹೇಶ ಮಠ ಕಿರಿಯ ಮೊಬೈಲ್ ಸಂಖ್ಯೆ 9986331421ನ್ನು ಸಂಪರ್ಕಿಸಲು ಕೋರಲಾಗಿದೆ.
ಸೇಡಂ: ಮೆಟ್ರಿಕ್ ಪೂರ್ವ ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
*************************************************************
ಕಲಬುರಗಿ,ಮೇ.23.(ಕ.ವಾ.)-ಸೇಡಂ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ/ ಬಾಲಕಿಯರ ವಸತಿ ನಿಲಯಲ್ಲಿ ಖಾಲಿಯಿರುವ ಸ್ಥಳಗಳಿಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸೇಡಂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ತಿತಿತಿ.sತಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್ ಮೂಲಕ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ದೃಢೀಕೃತ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ವಸತಿ ನಿಲಯಗಳ ವಾರ್ಡನ ಅವರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವಸತಿ ನಿಲಯವನ್ನು ಸಂಪರ್ಕಿಸಲು ಕೋರಲಾಗಿದೆ.
ಅಂಗವಿಕಲರ ಪ್ರಕರಣದಡಿ ವರ್ಗಾವಣೆ: ಮೇ 25ರಂದು ಶಿಕ್ಷಕರ ವೈದ್ಯಕೀಯ ತಪಾಸಣೆ
**************************************************************************
ಕಲಬುರಗಿ,ಮೇ.23.(ಕ.ವಾ.)-ಪ್ರಸಕ್ತ 2017-18 ನೇ ಸಾಲಿನ ಅಂಗವಿಕಲರ ಪ್ರಕರಣಗಳಡಿ ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ ಹಾಗೂ “ಎ” ವಲಯದಲ್ಲಿ ಗರಿಷ್ಟ ಸೇವೆ ಸಲ್ಲಿಸಿದ ಅಂಗವಿಕಲ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ವೈದ್ಯಕೀಯ ತಪಾಸಣೆ ಮಾಡಿ ನೈಜತೆಯನ್ನು ಪರಿಶೀಲನೆಗಾಗಿ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸಲ್ಲಿಸಿರುವ ಶಿಕ್ಷಕರ ಪಟ್ಟಿಯನ್ನು ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ
ಈ ಪಟ್ಟಿಯಲ್ಲಿ ಹೆಸರು ಇರುವ ಶಿಕ್ಷಕರು ಮೇ 25 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಮಂಡಳಿ ನಡೆಸುವ ವೈದ್ಯಕೀಯ ತಪಾಸಣೆಗಾಗಿ ಸಂಬಂಧಪಟ್ಟ ಶಿಕ್ಷಕರು ಅಂಗವಿಕಲತೆಯ ದಾಖಲೆ ಸಮೇತ ಹಾಜರಾಗಬೇಕೆಂದು ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರಿಕ್ ಪೂರ್ವ ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
******************************************************
ಕಲಬುರಗಿ,ಮೇ.23.(ಕ.ವಾ.)-ಚಿತ್ತಾಪುರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ದಂಡೋತಿ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಚಿತ್ತಾಪುರ ಪಟ್ಟಣದಲ್ಲಿ 6 ರಿಂದ 10ನೇ ತರಗತಿವರೆಗೆ ಖಾಲಿಯಿರುವ ಸ್ಥಾನಗಳನ್ನು ಭರ್ತಿ ಮಾಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಚಿತ್ತಾಪುರ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಸರ್ಕಾರಿ/ಅಂಗೀಕೃತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಶೇ. 75 ರಷ್ಟು ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೇ. 25 ರಷ್ಟು ಸ್ಥಾನಗಳನ್ನು ಮೀಸಲಿರಿಸಲಾಗಿದೆ. ವಿದ್ಯಾರ್ಥಿಗಳು ಮತೀಯ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ್ದು, ರಾಜ್ಯದ ನಿವಾಸಿಯಾಗಿರಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರಥಮಾದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಹಿಂದಿನ ಸಾಲಿನ ವಾರ್ಷಿಕ ಪರೀಕ್ಷೆಯ ಎಲ್ಲ ವಿಷಯಗಳಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.
ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 44,500ರೂ. ಹಾಗೂ ಪ್ರವರ್ಗ-1ಕ್ಕೆ 1 ಲಕ್ಷ ರೂ.ಗಳ ಮೀರಿರಬಾರದು. ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಚಿತ್ತಾಪುರ ಇಂದಿರಾನಗರದಲ್ಲಿರುವ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ ಮೊಬೈಲ್ ಸಂಖ್ಯೆ 9019491939, 9880887118, ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ದಂಡೋತಿ ಮೊಬೈಲ್ ಸಂಖ್ಯೆ 9742637241, ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಚಿತ್ತಾಪುರ ಮೊಬೈಲ್ ಸಂಖ್ಯೆ 8217517299ನ್ನು ಸಂಪರ್ಕಿಸಲು ಕೋರಲಾಗಿದೆ.
ಪ್ರಥಮ ಬಿ.ಎ. ಹಾಗೂ ಬಿ.ಕಾಂ ಪ್ರವೇಶ ಪ್ರಕ್ರಿಯೆ ಪ್ರಾರಂಭ
***************************************************
ಕಲಬುರಗಿ,ಮೇ.23.(ಕ.ವಾ.)-ಕಲಬುರಗಿ ತಾಲೂಕಿನ ಮಹಾಗಾಂವ ಕ್ರಾಸ್‍ನ ಸರ್ಕಾರಿ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ 2018-19ನೇ ಸಾಲಿಗೆ ಪ್ರಥಮ ಬಿ.ಎ ಹಾಗೂ ಬಿ.ಕಾಂ. ಪದವಿ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಪಿ.ಯು.ಸಿ., ಐಟಿಐ ಹಾಗೂ ತತ್ಸಮಾನ ಪರೀಕ್ಷೆಯಲ್ಲಿ ಪಾಸಾದ ಗ್ರಾಮದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9845478101, 9739119791, 9886851383, 9886608704, 9845673274ಗಳನ್ನು ಸಂಪರ್ಕಿಸಬೇಕೆಂದು ಎಂದು ಮಹಾಗಾಂವ ಕ್ರಾಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Thursday, 17 May 2018

news date: 17-5-2018

 ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ ಸ್ಥಳಾಂತರ
ಕಲಬುರಗಿ,ಮೇ.17.(ಕ.ವಾ.)-ಕಲಬುರಗಿ ಮಿನಿ ವಿಧಾನ ಸೌಧ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯಾಲಯವನ್ನು ಕಲಬುರಗಿ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದ ಬಳಿಯ ಕನ್ನಡ ಭವನ ಪಕ್ಕದಲ್ಲಿರುವ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಾಲಯದ ಮೊದಲನೇ ಮಹಡಿಗೆ ಸ್ಥಳಾಂತರಿಸಲಾಗಿದೆ. ಈ ಕಚೇರಿ ಕೆಲಸಗಳಿಗಾಗಿ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲ ಅಲ್ಪಸಂಖ್ಯಾತರು ಮೇಲ್ಕಂಡ ಹೊಸ ವಿಳಾಸಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಯುವ ವಿಜ್ಞಾನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಕಲಬುರಗಿ,ಮೇ.17.(ಕ.ವಾ.)-ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತುದಿಂದ 2017-18ನೇ ಸಾಲಿಗೆ ಯುವ ವಿಜ್ಞಾನಿ ಪ್ರಶಸ್ತಿಗಾಗಿ 9 ರಿಂದ 12 ವರ್ಗದಲ್ಲಿ ಒದುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ ಬಿ. ಕಡ್ಲೇವಾಡ ತಿಳಿಸಿದ್ದಾರೆ.
ಎಳೆಯ ವಯಸ್ಸಿನಲ್ಲೇ ವೈಜ್ಞಾನಿಕ ವಿಧಾನದ ಮನವರಿಕೆ ಮಾಡುವುದು, ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸುವುದು, ರಾಜ್ಯದ/ ರಾಷ್ಟ್ರದ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದು, ಮೂಲ ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಹಾಗೂ ಚಿಂತನ ಕೌಶಲ್ಯವನ್ನು ವರ್ಧಿಸಬೇಕೆಂಬುವುದು ಇದರ ಉದ್ದೇಶವಾಗಿದೆ. ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೇಂದ್ರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಅಥವಾ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ತಿತಿತಿ.ಞಡಿvಠಿ.oಡಿg ವೆಬ್‍ಸೈಟ್‍ದಿಂದ ಅರ್ಜಿ ಮತ್ತು ಮಾಹಿತಿ ಪಡೆಯಬಹುದಾಗಿದೆ.
ಆಸಕ್ತಿ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜೂನ್ 14 ರೊಳಗೆ ಆಯಾ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಹಾಗೂ ಅರ್ಜಿ ಒಂದು ಪ್ರತಿಯನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೇಂದ್ರ ಕಚೇರಿಗೆ ಸಲ್ಲಿಸಬೇಕು. ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಜೂನ್ 23 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಗುತ್ತಿದೆ.
ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಯುವ ವಿಜ್ಞಾನಿಗಳು ರಾಜ್ಯಮಟ್ಟದ ಯುವ ವಿಜ್ಞಾನಿಗಳ ಸಮಾವೇಶದಲ್ಲಿ ಭಾಗವಹಿಸಲು ಅರ್ಹರು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ 5000ರೂ., ದ್ವಿತೀಯ 3000ರೂ. ಹಾಗೂ ತೃತೀಯ 2000 ರೂ.ಗಳ ಬಹುಮಾನ ನೀಡಲಾಗುವುದು. ರಾಜ್ಯ ಮಟ್ಟಕ್ಕೆ ನಾಲ್ಕು ಯುವ ವಿಜ್ಞಾನಿಗಳಿಗೆ ತಲಾ 10,000 ರೂ.ಗಳ ಬಹುಮಾನ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕಚೇರಿ ದೂರವಾಣಿ ಸಂಖ್ಯೆ 080-26718939, ಮೊಬೈಲ್ ಸಂಖ್ಯೆ 9483549159, 9008442557, 9449530245ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಕರಾವಿಪ ದಿಂದ ಪಕ್ಷಿ ಸಂಕುಲ ಸಂರಕ್ಷಿಸಲು ರಾಜ್ಯದಾದ್ಯಂತ ಜಾಗೃತಿ ಅಭಿಯಾನ
ಕಲಬುರಗಿ,ಮೇ.17.(ಕ.ವಾ.)-ಈ ರಣಬಿಸಿಲಿನ ಬೇಸಿಗೆಯಲ್ಲಿ ಪಕ್ಷಿಗಳು ನೀರು-ಆಹಾರವಿಲ್ಲದೆ ಮೃತಪಡುತ್ತಿವೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಅಪರೂಪದ ಪಕ್ಷಿಗಳ ರಕ್ಷಣೆಗಾಗಿ, ಬೇಸಿಗೆ ಕಾಲದಲ್ಲಿ ಅವುಗಳ ನೀರಿನ ದಾಹ ನೀಗಿಸುವ “ಪಕ್ಷಿ ಸಂಕುಲ” ವನ್ನು ಸಂರಕ್ಷಿಸಲು ರಾಜ್ಯಾದ್ಯಂತ ಜಾಗೃತಿ ಮೂಡಿಸಲು ಅಭಿಯಾನವನ್ನು ಹಮ್ಮಿಕೊಂಡಿದೆ. ಜನಸಾಮಾನ್ಯರು, ಪರಿಸರ ಪ್ರೇಮಿಗಳು ಹಾಗೂ ಪಕ್ಷಿ ಪ್ರೀಯರು ಈ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ ಬಿ. ಕಡ್ಲೇವಾಡ ಕರೆ ನೀಡಿದ್ದಾರೆ.


ಸಾರ್ವಜನಿಕರು ತಮ್ಮ ಮನೆಯ ಮಹಡಿಯ ಮೇಲೆ ತೆರೆದ ಸ್ಥಳಗಳಲ್ಲಿ, ಮರ-ಗಿಡಗಳಲ್ಲಿ ನೀರು-ಆಹಾರ ಪೂರೈಕೆಯ ಸಾಧನ/ಬಾಟಲ್, ಪಾತ್ರೆಗಳನ್ನಿಟ್ಟು ಪಕ್ಷಿಗಳ ಹಸಿವು/ದಾಹ ನೀಗಿಸಿ, ಪಕ್ಷಿಗಳ ಉಳಿವಿಗಾಗಿ ಕೃತಕ ಗೂಡುಗಳನ್ನು ಸಿದ್ಧಪಡಿಸಿ ಅವುಗಳಿಗೆ ಅನುಕೂಲ ಮಾಡಿಕೊಡಬೇಕು. ಭೇಟಿಯ ಹೆಸರಿನಲ್ಲಿ ಪ್ರಾಣಿ ಪಕ್ಷಿಗಳನ್ನು ಬಲಿಕೊಡದೇ ಅವುಗಳ ಸಂತತಿ ಉಳಿಸೋಣ ಹಾಗೂ ಅವನತಿಯ ಅಂಚಿನಲ್ಲಿರುವ ಪಕ್ಷಿಗಳ ರಕ್ಷಣೆಗೆ ಪಣ ತೋಡೋಣ ಎಂದು ಅವರು ತಿಳಿಸಿದ್ದಾರೆ.
ವಾಹನ ಬಾಡಿಗೆಗಾಗಿ ದರಪಟ್ಟಿ ಆಹ್ವಾನ
ಕಲಬುರಗಿ,ಮೇ.17.(ಕ.ವಾ.)-ಕಲಬುರಗಿ ಜಿಲ್ಲಾ ವಕ್ಫ್ ಕಚೇರಿಗೆ ದೈನಂದಿನ ಕೆಲಸ ಕಾರ್ಯಗಳಿಗೆ  ಮೂರು ತಿಂಗಳ ಅವಧಿಗೆ ಒಂದು (ಟಾಟಾ ಇಂಡಿಗೋ/ ವಿಸ್ಟಾ/ ಟೊಯೊಟೊ ಇಟಿಯೋಸ್/ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಹಾಗೂ ಇತರೆ ವಾಹನ) ಲಘು ವಾಹನವನ್ನು 2017-18ನೇ ಸಾಲಿಗೆ ಬಾಡಿಗೆ ಆಧಾರದ ಮೇಲೆ ಪಡೆಯಲು  ಆಸಕ್ತರಿಂದ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.
ಆಸಕ್ತರು ಜಿಲ್ಲಾ ವಕ್ಫ್ ಕಚೇರಿಯಿಂದ ದರಪಟ್ಟಿ ನಮೂನೆಯನ್ನು ಪಡೆದು ಬಾಡಿಗೆಯ ದರಪಟ್ಟಿ ನಮೂದಿಸಿ ಸೀಲು ಮಾಡಿದ ಲಕೋಟೆಯನ್ನು ಮೇ 25 ರ ಮಧ್ಯಾಹ್ನ 1.30 ಗಂಟೆ ಯೊಳಗಾಗಿ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಹತೆ, ನಿಬಂಧನೆ ಮುಂತಾದ ವಿವರಗಳಿಗಾಗಿ ಕಲಬುರಗಿ ಜಿಲ್ಲಾ ವಕ್ಫ್ ಕಚೇರಿಯ ಕಾರ್ಯಾಲಯ ಹಾಗೂ ದೂರವಾಣಿ ಸಂಖ್ಯೆ  08472-275963ನ್ನು ಸಂಪರ್ಕಿಸಲು ಕೋರಿದೆ.
ಮೇ 18ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಮೇ.17.(ಕ.ವಾ.)-ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-1ರಿಂದ 11 ಕೆ.ವಿ. ಫೀಡರ್‍ನಲ್ಲಿ ಮೇ 17ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸುಧಾರಣಾ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ನಗರದ ನೀರು ಸರಬರಾಜು ಮಾಡುವ ಸರಡಗಿ ಮೂಲ ಸ್ಥಾವರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಕಾರಣ ಮೇ 18ರಂದು ಕಲಬುರಗಿ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಲಬುರಗಿ ನಗರದ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, 15 May 2018

News and photo date: 15--5--2018

ವಿಧಾನಸಭಾ ಚುನಾವಣೆ: ಕಲಬುರಗಿ ಜಿಲ್ಲೆಯ ಫಲಿತಾಂಶದ ವಿವರ
*************************************************************
ಕಲಬುರಗಿ,ಮೇ.15.(ಕ.ವಾ.)- ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 12 ರಂದು ನಡೆದ ಚುನಾವಣೆಯ ಫಲಿತಾಂಶವು ಮಂಗಳವಾರ ಪ್ರಕಟಗೊಂಡಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ 5 ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದು, ಉಳಿದಂತೆ 4 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
ವಿಧಾನಸಭಾವಾರು ಕಣದಲ್ಲಿದ್ದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ.
34-ಅಫಜಲಪುರ ವಿಧಾನಸಭಾ ಕ್ಷೇತ್ರ:
*************************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ಮಲಕಾಜಪ್ಪ ತಂದೆ ಯಶ್ವಂತರಾವ ಪಾಟೀಲ ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್ 71735 (ಗೆಲುವಿನ ಅಂತರ 10594)
2 ಮಾಲಿಕಯ್ಯ ಗುತ್ತೇದಾರ್ ತಂದೆ ವೆಂಕಯ್ಯ ಗುತ್ತೇದಾರ್ ಭಾರತೀಯ
ಜನತಾ ಪಕ್ಷ 61141
3 ರಾಜೇಂದ್ರಕುಮಾರ ತಂದೆ ವಿಠ್ಠಲರಾವ
ಜಾತ್ಯಾತೀತ ಜನತಾ ದಳ 13340
4 ರಾಜು ತಂದೆ ರಾಮಚಂದ್ರ ಎ.ಆಯ್.ಎಮ್.ಇ.ಪಿ. 596
5 ದಿಗಂಬರ ತಂದೆ ಸಂಗಪ್ಪ ಪಕ್ಷೇತರ 590
6 ಮಲ್ಲಿಕಾರ್ಜುನ ತಂದೆ ಶರಣಪ್ಪ ವಾಳಿ ಪಕ್ಷೇತರ 564
7 ಖಲೀಫ ಬರ್ಮಾ ತಂದೆ ಮಲ್ಲಪ್ಪ ಬರ್ಮಾ ಡಾ|| ಅಂಬೇಡ್ಕರ್ ಪಿಪಲ್ಸ್
ಪಾರ್ಟಿ 499
8 ನೋಟಾ -- 1243
35-ಜೇವರ್ಗಿ ವಿಧಾನಸಭಾ ಕ್ಷೇತ್ರ:
******************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ಅಜಯಸಿಂಗ್ ತಂದೆ ಧರ್ಮಸಿಂಗ್ ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್ 68508 (ಗೆಲುವಿನ ಅಂತರ 16056)
2 ಡೊಡ್ಡಪ್ಪ ಗೌಡ ತಂದೆ ಶಿವಲಿಂಗಪ್ಪ ಗೌಡ ಭಾರತೀಯ ಜನತಾ ಪಕ್ಷ
52452
3 ಕೇದಾರಲಿಂಗಯ್ಯ ಹಿರೇಮಠ ತಂದೆ ಸಂಗನಬಸಯ್ಯ ಜನತಾ ದಳ
(ಜಾತ್ಯಾತೀತ) 35691
4 ಪ್ರಭು ತಂದೆ ಕಾಳಪ್ಪ ಆಲ್ ಇಂಡಿಯಾ ಮಹಿಳಾ
ಎಂಪಾವರಮೆಂಟ್ ಪಾರ್ಟಿ 856
5 ವಕೀಲ ಪಟೇಲ್ ತಂದೆ ಖಾಜಾ ಪಟೇಲ್ ಪಕ್ಷೇತರ 813
6 ಸಿದ್ದಪ್ಪ ತಂದೆ ಚಂದ್ರಾಮಪ್ಪ ಪಕ್ಷೇತರ 732
7 ಪ್ರವೀಣ ಕುಮಾರ ತಂದೆ ಬಸಯ್ಯ ಶಿವಸೇನಾ 478
8 ರಾಮು ತಂದೆ ಚತ್ರು ಪಕ್ಷೇತರ 318
9 ಭೀಮಯ್ಯ ತಂದೆ ಸೋಮಯ್ಯ ಪಕ್ಷೇತರ 238
10 ನಾಗೇಶ ತಂದೆ ವೀರಣ್ಣ ಪಕ್ಷೇತರ 229
11 ಧರ್ಮಣ್ಣ ತಂದೆ ಮೌಲಪ್ಪ ಪಕ್ಷೇತರ 121
12 ನೋಟಾ --- 1310
40-ಚಿತ್ತಾಪುರ (ಎಸ್.ಸಿ.)ವಿಧಾನಸಭಾ ಕ್ಷೇತ್ರ:
*****************************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ಪ್ರಿಯಾಂಕ್ ಖರ್ಗೆ ತಂದೆ ಮಲ್ಲಿಕಾರ್ಜುನ ಖರ್ಗೆ ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್ 69700 (ಗೆಲುವಿನ ಅಂತರ 4393)
2 ವಾಲ್ಮಿಕ ನಾಯಕ ತಂದೆ ಕಮಲು ಭಾರತೀಯ ಜನತಾ ಪಕ್ಷ 65307
3 ದೇವರಾಜ ವಿ.ಕೆ. ಕಮಲಮ್ಮ ಬಹುಜನ ಸಮಾಜ ಪಕ್ಷ
(ಬಿ.ಎಸ್.ಪಿ.) 1218
4 ರಾಜು ಹದನೂರ ತಂದೆ ಯಲ್ಲಪ್ಪ ಆಲ್ ಇಂಡಿಯಾ ಮಹಿಳಾ
ಎಂಪಾವರಮೆಂಟ್ ಪಕ್ಷ 1136
5 ಸಾಬಣ್ಣ ಬಿ ದೊಡ್ಮನಿ ತಂದೆ ಭೀಮಣ್ಣ ಪಕ್ಷೇತರ 615
6 ಶಂಕರ ಚವ್ಹಾಣ ತಂದೆ ಸುಬ್ಬಣ್ಣ ಪಕ್ಷೇತರ 612
7 ವಿನೋದ ಅಣ್ಣಾ ತಂದೆ ಬ್ರಹ್ಮಾಜ್ಞಾನಿ ಪಕ್ಷೇತರ 418
8 ರುಕ್ಕಪ್ಪ ಕೆ. ಲೀಡರ್ ತಂದೆ ಖಲೀಪಣ್ಣ ಪಕ್ಷೇತರ 311
9 ನೋಟಾ -- 1052
41-ಸೇಡಂ ವಿಧಾನಸಭಾ ಕ್ಷೇತ್ರ:
*****************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರ ಪಕ್ಷ ಪಡೆದ ಮತಗಳು
1 ರಾಜಕುಮಾರ ತಂದೆ ವೀರಶೆಟ್ಟೆಪ್ಪಾ ಭಾರತೀಯ ಜನತಾ ಪಕ್ಷ
80668 (ಗೆಲುವಿನ ಅಂತರ 7200)
2 ಶರಣಪ್ರಕಾಶ ತಂದೆ ರುದ್ರಪ್ಪ ಪಾಟೀಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
73468
3 ಸುನಿತಾ ತಂದೆ ಭೀಮಶ್ಯಾ ಜನತಾದಳ (ಜಾತ್ಯಾತೀತ) 2075
4 ರೇಖಾ ದಯಾನಂದ ಆಲ್ ಇಂಡಿಯಾ ಮಹಿಳಾ
ಎಂಪಾವರಮೆಂಟ್ ಪಾರ್ಟಿ (ಎ.ಐ.ಎಮ್.ಇ.ಪಿ.) 1099
5 ನೋಟಾ -- 1260
42-ಚಿಂಚೋಳಿ (ಎಸ್.ಸಿ.) ವಿಧಾನಸಭಾ ಕ್ಷೇತ್ರ:
*****************************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ಉಮೇಶ ತಂದೆ ಗೋಪಾಲದೇವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
73905 (ಗೆಲುವಿನ ಅಂತರ 19212)
2 ಸುನೀಲ ವಲ್ಯಾಪೂರ ತಂದೆ ಯಮುನಪ್ಪ ಭಾರತೀಯ ಜನತಾ ಪಕ್ಷ 54693
3 ಸುಶಿಲಬಾಯಿ ಬಸವರಾಜ ಜನತಾದಳ (ಜಾತ್ಯಾತೀತ) 1621
4 ಮಿಥುನ ತಂದೆ ಖೆಮು ಪಕ್ಷೇತರ 391
5 ವಿಜಯಲಕ್ಷ್ಮೀ ಲಕ್ಷ್ಮಣ ಎ.ಐ.ಎಮ್.ಇ.ಪಿ. 317
6 ಬಸವರಾಜ ಅನ್ವರಕರ ತಂದೆ ನಾಗಪ್ಪ ಪಕ್ಷೇತರ 246
7 ಗೌತಮ ತಂದೆ ಮಾಣಿಕ ನಮ್ಮ ಕಾಂಗ್ರೆಸ್ 233
8 ಬಸವರಾಜ ತಂದೆ ಮಲ್ಲಯ್ಯಾ ಭಾರತೀಯ ಹೊಸ ಕಾಂಗ್ರೆಸ್ 185
9 ಶ್ರೀಕಾಂತ ತಂದೆ ಮಾಣಿಕರಾವ ಡಾ|| ಎ.ಪಿ.ಪಿ. 176
10 ಶಂಕರ ಜಾಧವ ತಂದೆ ಲಿಂಬಾಜಿ ಜಾಧವ ಬಿ.ಪಿ.ಪಿ. 149
11 ನೋಟಾ --- 1082
43-ಗುಲಬರ್ಗಾ ಗ್ರಾಮೀಣ (ಎಸ್.ಸಿ.)ವಿಧಾನಸಭಾ ಕ್ಷೇತ್ರ:
***************************************************
ಕ್ರ.ಸಂ. ಉಮೇದುವಾರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ಬಸವರಾಜ ಮತ್ತಿಮುಡ ತಂದೆ ಭೀಮಶ್ಯಾ ಭಾರತೀಯ ಜನತಾ ಪಕ್ಷ
61750 (ಗೆಲುವಿನ ಅಂತರ 12386)
2 ವಿಜಯಕುಮಾರ ಜಿ. ರಾಮಕೃಷ್ಣ ತಂದೆ ಜಿ. ರಾಮಕೃಷ್ಣ
ಕಾಂಗ್ರೇಸ್ 49364
3 ರೇವು ನಾಯಕ ಬೆಳಮಗಿ ತಂದೆ ಲೋಕು ಜನತಾ ದಳ (ಜಾತ್ಯಾತೀತ)
29538
4 ಅಂಬಲಗಾ ಮಾರುತಿ ಮಾನಪಡೆ ತಂದೆ ತುಕಾರಾಮ ಭಾರತ ಕಮ್ಯುನಿಸ್ಟ್ ಪಕ್ಷ
(ಮಾಕ್ಸ್‍ವಾದಿ) 3491
5 ಗಿರೀಶ್ ಬೈಲಪ್ಪ ಕಂಜಾನವರ ತಂದೆ ಬೈಲಪ್ಪ ಪಕ್ಷೇತರ 2133
6 ಗಣಪತರಾವ್ ಕೆ. ಮಾನೆ ತಂದೆ ಕನಕಪ್ಪಾ ಎಸ್‍ಯುಸಿಐ-(ಸಿ) 1044
7 ಸುಜಾತಾ ತಂದೆ ರಾಮಣ್ಣಾ ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್
ಪಾರ್ಟಿ 799
8 ವಿಜಯ ಜಾಧವ ತಂದೆ ಗೋವಿಂದ ಜಾಧವ ಪಕ್ಷೇತರ 593
9 ಶಿವಶರಣಪ್ಪ ಮಾರುತಿರಾವ್ ತಂದೆ ಮಾರುತಿರಾವ್ ಪಕ್ಷೇತರ 541
10 ರಮೇಶ್ ಭೀಮಸಿಂಗ್ ತಂದೆ ಭೀಮಸಿಂಗ್ ಚವ್ಹಾಣ ಪಕ್ಷೇತರ 482
11 ಶಂಕರ ಜಾಧವ ತಂದೆ ಲಿಂಬಾಜಿ ಭಾರತೀಯ ಪೀಪಲ್ಸ್ ಪಾರ್ಟಿ
(ಬಿಪಿಪಿ) 431
12 ಮಂಜುನಾಥ ಅಣ್ಣಪ್ಪಾ ತಂದೆ ಅಣ್ಣಪ್ಪಾ ಪಕ್ಷೇತರ 394
13 ಭರತಕುಮಾರ ಡಿ. ಕುಮಸಿ ತಂದೆ ಧೂಳಪ್ಪ ಪಕ್ಷೇತರ 323
14 ನೋಟಾ -- 1612
44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರ:
**************************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ದತ್ತಾತ್ರೇಯ ತಂದೆ ಚಂದ್ರಶೇಖರ ಭಾರತೀಯ ಜನತಾ ಪಾರ್ಟಿ
64788 (ಗೆಲುವಿನ ಅಂತರ 5431)
2 ಅಲ್ಲಂಪ್ರಭು ಪಾಟೀಲ ತಂದೆ ಶರಣಪ್ಪಗೌಡ ಪಾಟೀಲ ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್ 59357
3 ಬಸವರಾಜ ಡಿಗ್ಗಾವಿ ತಂದೆ ವೀರಣ್ಣಾ ಡಿಗ್ಗಾವಿ ಜನತಾದಳ (ಜಾತ್ಯಾತೀತ)
14359
4 ಸೂರ್ಯಕಾಂತ ನಿಂಬಾಳಕರ್ ತಂದೆ ಶಾಮರಾವ ನಿಂಬಾಳಕರ್ ಬಹುಜನ
ಸಮಾಜ ಪಾರ್ಟಿ 1853
5 ರಿಜವಾನ್ ಉರ್ ರಹಮಾನ್ ಸಿದ್ದಿಕಿ ತಂದೆ ಫಜಲ ಮೊಹಮ್ಮದ ಸಿದ್ದಿಕಿ
ಪಕ್ಷೇತರ 597
6 ಮಕಬುಲ ಖಾನ ಹೀರಾಪುರ ತಂದೆ ಮಹ್ಮದ್ ಮಾದರ ಖಾನ್ ಪಕ್ಷೇತರ
479
7 ಮಾಳಪ್ಪಾ ಶರಣಪ್ಪ ಉದನೂರ ತಂದೆ ಶರಣಪ್ಪ ಭಾರತೀಯ ಹೊಸ
ಕಾಂಗ್ರೆಸ್ ಪಕ್ಷ 288
8 ಪ್ರಲ್ಹಾದ ಮಟಮಾರಿ ತಂದೆ ಮುರಳಿ ಮನೋಹರರಾವ ಪಕ್ಷೇತರ 259
9 ಸೈಯ್ಯದ್ ಅಬ್ದುಲ್ ಬಾರಿ ತಂದೆ ಸೈಯ್ಯದ್ ಅಬ್ದುಲ್ ಖಯ್ಯಾಮ್ ವೆಲ್‍ಫೇರ್
ಪಾರ್ಟಿ ಆಫ್ ಇಂಡಿಯಾ 252
10 ಜಗನ್ನಾಥ ತಂದೆ ಮನ್ನು ನ್ಯಾಷನಲ್ ಡೆವಲಪ್‍ಮೆಂಟ್ ಪಾರ್ಟಿ
(ಎನ್.ಡಿ.ಪಿ.) 229
11 ರತ್ನ ಸುಖಜೀಂದರ ಸಿಂಗ್ ಸುಖಜೀಂದರ್ ಸಿಂಗ್ ಆಲ್ ಇಂಡಿಯಾ ಮಹಿಳಾ
ಎಂಪಾವರಮೆಂಟ್ ಪಾರ್ಟಿ 184
12 ವೀರಣ್ಣಾ ತಂದೆ ಮಲ್ಲಣ್ಣಾ ಶಿವಸೇನಾ 179
13 ಧರ್ಮವೀರ ತಂದೆ ಶಾಮರಾವ ಪಕ್ಷೇತರ 171
14 ಚಾಂದಸಾಬ ಮಕ್ತುಂಸಾಬ ತಂದೆ ಮುಕ್ತುಂಸಾಬ ಪಕ್ಷೇತರ 138
15 ರಮಾದೇವಿ ರಾಜಕುಮಾರ ಮಾಡಗಿ ಶ್ರಮಜೀವಿ 115
16 ನೋಟಾ -- 1114
45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ:
****************************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ಕನೀಜ್ ಫಾತಿಮಾ ಖಮರುಲ್ ಇಸ್ಲಾಂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
64311 (ಗೆಲುವಿನ ಅಂತರ 5940)
2 ಚಂದ್ರಕಾಂತ ತಂದೆ ಬಸವರಾಜ ಪಾಟೀಲ ಭಾರತೀಯ ಜನತಾ ಪಾರ್ಟಿ
58371
3 ನಾಸೀರ ಹುಸೇನ ತಂದೆ ಸಾದತ ಹುಸೇನ್ ಜನತಾದಳ (ಸೆಕ್ಯೂಲರ್)
14422
4 ಮೊಹ್ಮದ್ ಕಿವಾಮುದ್ದೀನ್ ತಂದೆ ಮೊಹ್ಮದ್ ತಾಜುದ್ದೀನ್ ಜುನೈದಿ ಪಕ್ಷೇತರ
7166
5 ಮಹ್ಮದ ಖಾಜಾ ಮೋಹಸಿನೋದ್ದೀನ್ ತಂದೆ ಮೊಹ್ಮದ್ ಖಾಜಾ
ಮೋಯಿನುದ್ದಿನ್ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
(ಎಸ್.ಡಿ.ಪಿ.ಐ. ) 797
6 ಮೊಹ್ಮದ್ ಶಫಿ ತಂದೆ ಖಾಸಿಮ ಪಟೇಲ್ ಪಕ್ಷೇತರ 675
7 ಸೈಯದ್ ಇಮ್ರಾನ್ ತಂದೆ ಸೈಯದ್ ಅಬ್ದುಲ್ ರಹೆಮಾನ್ ಪಕ್ಷೇತರ 450
8 ಸಂಜೀವಕುಮಾರ ಕರಿಕಲ್ ತಂದೆ ಸಿದ್ದಪ್ಪ ಕರಿಕಲ್ ಆಮ್ ಆದ್ಮಿ ಪಾರ್ಟಿ
198
9 ಅಬ್ದುಲ್ ಹಮೀದ್ ಡಬುರ ತಂದೆ ಹಾಜಿ ಅಬ್ದುಲ್ ರಹೇಮಾನ್ ಅಖಿಲ
ಭಾರತೀಯ ಮುಸ್ಲಿಂ ಲೀಗ್ (ಎಸ್) 188
10 ಶಾಮಲಾ ಮಾಳಪ್ಪ ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿ 174
11 ಸಕೀನಾ ಪಟೇಲ್ ತಂದೆ ಅಬ್ದುಲ್ ಗನಿ ಆಲ್ ಇಂಡಿಯಾ ಮಹಿಳಾ
ಎಂಪಾವರಮೆಂಟ್ ಪಾರ್ಟಿ 160
12 ಎಸ್.ಎಂ. ಜಲಾಲುದ್ದೀನ್ ತಂದೆ ಎಸ್.ಎಂ.ಎಂ. ಶರೀಫಜಾದಾ ಪಕ್ಷೇತರ
151
13 ಪ್ರಕಾಶ ತಂದೆ ಶಂಕರ ರಾಠೋಡ ಭಾರತೀಯ ಬಹುಜನ ಕ್ರಾಂತಿ ದಳ
149
14 ರುಕುಮ್ ಶಾಹ ತಂದೆ ಚಿರಾಗ ಅಲಿ ಶಾಹ ಆಲ್ ಇಂಡಿಯಾ ಉಲಮಾ
ಕಾಂಗ್ರೆಸ್ 121
15 ಅಬ್ದುಲ್ ಬಸೀರ್ ತಂದೆ ಅಬ್ದುಲ್ ಹಮೀದ್ ಪಕ್ಷೇತರ 103
16 ನೋಟಾ
46-ಆಳಂದ ವಿಧಾನಸಭಾ ಕ್ಷೇತ್ರ:
*******************************
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು
1 ಸುಭಾಷ ತಂದೆ ರುಕ್ಕಯ್ಯ ಗುತ್ತೆದಾರ್ ಭಾರತೀಯ ಜನತಾ ಪಕ್ಷ 76815
(ಗೆಲುವಿನ ಅಂತರ )697
2 ಭೋಜರಾಜ ತಂದೆ ರಾಮಚಂದ್ರಪ್ಪ ಪಾಟೀಲ ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್ 76118
3 ಅರುಣಕುಮಾರ ಸಿ. ಪಾಟೀಲ ತಂದೆ ಚನ್ನಬಸಪ್ಪಾ ಪಾಟೀಲ ಜನತಾದಳ
(ಸಂಯುಕ್ತ) 2213
4 ಸೂರ್ಯಕಾಂತ ತಂದೆ ಕಾಶಿರಾಯ ಜನತಾದಳ (ಜಾತ್ಯಾತೀತ)
1387
5 ಶಿವಯ್ಯ ತಂದೆ ಶಿವಶರಣಯ್ಯ ಪಕ್ಷೇತರ 808
6 ರತ್ನಪ್ಪ ತಂದೆ ರಾಮಚಂದ್ರಪ್ಪ ಪಕ್ಷೇತರ 393
7 ಅಫಜಲ ತಂದೆ ತಾಹೇರ್ ಅನ್ಸಾರಿ ಆಲ್ ಇಂಡಿಯಾ ಮಹಿಳಾ
ಎಂಪಾವರಮೆಂಟ್ ಪಾರ್ಟಿ 390
8 ಶರಣಪ್ಪಾ ತಂದೆ ಭಿಮಶಾ ಭಾರತೀಯ ಜನಶಕ್ತಿ ಕಾಂಗ್ರೆಸ್ 388
9 ಕುಶಾಲ ತಂದೆ ಚತ್ರು ರಾಠೋಡ ನ್ಯಾಷನಲ್ ಡೆವಲಪ್‍ಮೆಂಟ್ ಪಾರ್ಟಿ
344
10 ಜಹೀರ ತಂದೆ ಇಬ್ರಾಹಿಂ ಪಕ್ಷೇತರ 199
11 ದತ್ತಪ್ಪ ತಂದೆ ಕೃಷ್ಣಪ್ಪ ರಾಷ್ಟ್ರೀಯ ಸಮಾಜ ಪಕ್ಷ 109
12 ನೋಟಾ -- 1445
ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ವೇಳಾಪಟ್ಟಿ ಪ್ರಕಟ
**********************************************************
ಕಲಬುರಗಿ,ಮೇ.15.(ಕ.ವಾ.)-ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ಈ ಕೆಳಗಿನಂತೆ ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿ ಹರ್ಷ ಗುಪ್ತಾ ಅವರು ತಿಳಿಸಿದ್ದಾರೆ.
ಈ ಚುನಾವಣೆಗೆ ಮೇ 15ರಂದು ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಸಲು ಮೇ 22ಕೊನೆಯ ದಿನವಾಗಿದ್ದು, ಮೇ 23ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ ಹಾಗೂ ನಾಮಪತ್ರ ಹಿಂಪಡೆಯಲು ಮೇ 25 ಅಂತಿಮ ದಿನವಾಗಿರುತ್ತದೆ. ಜೂನ್ 8 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಜೂನ್ 12ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.
ಕಲಬುರಗಿ ವಿಭಾಗದ ಬೀದರ, ಕಲಬುರಗಿ, ಯಾದಗಿರಿ, ರಾಯಚೂರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳು ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಕರ್ನಾಟಕ ಈಶಾನ್ಯ ವಲಯದ ಪದವೀಧರ ಮತಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಈ ಚುನಾವಣೆಗೆ ಚುನಾವಣಾಧಿಕಾರಿಯಾಗಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಕಲಬುರಗಿ ಜಿಲ್ಲಾಧಿಕಾರಿಗಳು ಕಾರ್ಯನಿರ್ವಹಿಸುವರು.
ನಾಮಪತ್ರಗಳ ನಮೂನೆಗಳನ್ನು ಕಲಬುರಗಿ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಚುನಾವಣೆ ಶಾಖೆಯಿಂದ ಪಡೆಯಬೇಕು. ಭರ್ತಿ ಮಾಡಿದ ನಾಮಪತ್ರಗಳನ್ನು ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಕಾನ್ಫ್‍ರೆನ್ಸ್ ಹಾಲ್ (ಎರಡನೇ ಮಹಡಿ) ಮಿನಿ ವಿಧಾನಸೌಧ ಕಲಬುರಗಿಯಲ್ಲಿ ಮೇ 15 ರಿಂದ 22 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಲ್ಲಿಸಬಹುದಾಗಿದೆ. ಸ್ವೀಕೃತವಾದ ಎಲ್ಲ ನಾಮಪತ್ರಗಳನ್ನು ಮೇ 23ರಂದು ಬೆಳಿಗ್ಗೆ 11 ಗಂಟೆಗೆ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆ: ಸಹಾಯವಾಣಿ ಆರಂಭ
**************************************************************
ಕಲಬುರಗಿ,ಮೇ.15.(ಕ.ವಾ.)-ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಚುನಾವಣಾ ವಿಷಯಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿ ಹರ್ಷ ಗುಪ್ತಾ ಅವರು ತಿಳಿಸಿದ್ದಾರೆ.
ಈಗಾಗಲೇ ವಿಭಾಗದ ಜಿಲ್ಲಾಧಿಕಾರಿಗಳು ಹಾಗೂ ದಾವಣಗೆರೆ (ಹರಪನಹಳ್ಳಿ ತಾಲೂಕು) ಜಿಲ್ಲಾಧಿಕಾರಿ ಅವರು 24ಘಿ7 ಕಾರ್ಯನಿರ್ವಹಿಸಲು 1077 ಸಹಾಯವಾಣಿ ಪ್ರಾರಂಭಿಸಿದ್ದಾರೆ ಹಾಗೂ ಈಶಾನ್ಯ ಕರ್ನಾಟಕ ಪದವೀಧರ ಮತಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಕಲಬುರಗಿ ಇವರ ಕಾರ್ಯಾಲಯದಲ್ಲಿ ಸಹ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 08472-278806 ಇರುತ್ತದೆ. ಈ ಚುನಾವಣೆ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಲು ಈ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.


Monday, 14 May 2018

news and photo Date: 14-5-2018

ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು
*****************************
ಕಲಬುರಗಿ,ಮೇ.14.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 15ರಂದು ಬೆಳಗಿನ 8 ಗಂಟೆಯಿಂದ ಪ್ರಾರಂಭಗೊಳ್ಳಲಿದೆ. ಇದಕ್ಕಾಗಿ ಸುಮಾರು 485 ಮತ ಎಣಿಕೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಮತ ಎಣಿಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಸೋಮವಾರ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಅಫಜಲಪುರ, ಸಸ್ಯಶಾಸ್ತ್ರ ವಿಭಾಗದಲ್ಲಿ ಚಿಂಚೋಳಿ, ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ತಾಪುರ ಮತ್ತು ಸೇಡಂ, ಕನ್ನಡ ವಿಭಾಗದಲ್ಲಿ ಗುಲಬರ್ಗಾ ಉತ್ತರ ಮತ್ತು ದಕ್ಷಿಣ, ಪರೀಕ್ಷಾಂಗ ವಿಭಾಗದಲ್ಲಿ ಗುಲಬರ್ಗಾ ಗ್ರಾಮೀಣ ಮತ್ತು ಜೇವರ್ಗಿ ಹಾಗೂ ಪರೀಕ್ಷಾ ಭವನದಲ್ಲಿ ಆಳಂದ ಮತಕ್ಷೇತ್ರದ ಮತ ಎಣಿಕೆ ಮಾಡಲು ಮತ ಎಣಿಕಾ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಪ್ರತಿ ಮತಕ್ಷೇತ್ರದಲ್ಲಿ ಮತ ಎಣಿಕೆಗಾಗಿ 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ಓರ್ವ ಮತ ಎಣಿಕೆ ಸುಪರವೈಸರ್, ಅಸಿಸ್ಟಂಟ್ ಹಾಗೂ ಮೈಕ್ರೋ ಅಬ್ಸರ್ವರ್‍ಗಳನ್ನು ನೇಮಿಸಲಾಗಿದೆ. ಸರಿ ಸುಮಾರು 19 ರಿಂದ 20 ಸುತ್ತುಗಳಲ್ಲಿ ಮತ ಎಣಿಕೆ ಪೂರ್ಣಗೊಳ್ಳಲಿದೆ. ಬೆಳಿಗ್ಗೆ 7 ಗಂಟೆಯಿಂದ ಚುನಾವಣಾಧಿಕಾರಿ ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಅಂಚೆ ಮತಗಳನ್ನು ಸಹ ಎಣಿಕೆ ಮಾಡಲಾಗುವುದು. ಲಾಟರಿ ಮೂಲಕ ಪ್ರತಿ ಮತಕ್ಷೇತ್ರದಿಂದ ಒಂದು ಮತಗಟ್ಟೆಯನ್ನು ಆಯ್ಕೆ ಮಾಡಿ ಆ ಮತಗಟ್ಟೆಗೆ ಸಂಬಂಧಿಸಿದ ವಿವಿ ಪ್ಯಾಟ್ ಯಂತ್ರದಲ್ಲಿರುವ ಮತದಾನದ ಚೀಟಿಗಳನ್ನು ಎಣಿಕೆ ಮಾಡಲಾಗುವುದು. ಇದನ್ನು ಇ.ವಿ.ಎಂ. ಯಂತ್ರದ ಎಣಿಕೆಯೊಂದಿಗೆ ತಾಳೆ ನೋಡಲಾಗುವುದು ಎಂದರು.
ಮತ ಎಣಿಕಾ ಕೇಂದ್ರ ಹಾಗೂ ಸುತ್ತಮುತ್ತಲೂ ಸಂಪೂರ್ಣವಾಗಿ ಸಿಸಿ ಟಿ.ವ್ಹಿ. ಅಳವಡಿಸಲಾಗಿದೆ. ಮತದಾನಕ್ಕೆ ಬಳಸಿರುವ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿ ಪ್ಯಾಟ್‍ಗಳನ್ನು ಭದ್ರಕೋಣೆಯಲ್ಲಿ ಸಂಗ್ರಹಿಸಲಾಗಿದೆ. ಮತ ಎಣಿಕೆ ಪ್ರಕ್ರಿಯೆಗೆ ಮೂರು ಹಂತಗಳ ಭದ್ರತೆಯನ್ನು ಒದಗಿಸಲಾಗಿದ್ದು, ಭದ್ರತೆಗೆ ಪ್ಯಾರಾ ಮಿಲಿಟರಿ, ಸಶಸ್ತ್ರ ಮೀಸಲು ಪಡೆ ಹಾಗೂ ಸಿವಿಲ್ ಪೊಲೀಸ್ ಬಳಸಿಕೊಳ್ಳಲಾಗುತ್ತಿದೆ. ಮತ ಎಣಿಕೆಯನ್ನು ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲೆಯಾದ್ಯಂತ ಮೇ 13ರ ರಾತ್ರಿಯಿಂದ ಮೇ 16ರ ಬೆಳಗಿನವರೆಗೆ ಮದ್ಯಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ ಈ ಅವಧಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿರುವ ಹಿನ್ನೆಲೆಯಲ್ಲಿ ಮೆರವಣಿಗೆ ಹಾಗೂ ವಿಜೃಂಭಣೆಯನ್ನು ನಿಷೇಧಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು ಶೇ. 62.60 ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಅಫಜಲಪುರ ಶೇ. 67.45, ಜೇವರ್ಗಿ ಶೇ. 68.58, ಚಿತ್ತಾಪುರ ಶೇ. 60.64, ಸೇಡಂ ಶೇ. 73.34, ಚಿಂಚೋಳಿ ಶೇ. 68.47, ಗುಲಬರ್ಗಾ ಗ್ರಾಮೀಣ ಶೇ. 60.34, ಗುಲಬರ್ಗಾ ದಕ್ಷಿಣ ಶೇ. 52.46, ಗುಲಬರ್ಗಾ ಉತ್ತರ ಶೇ. 49.99 ಹಾಗೂ ಆಳಂದ ಶೇ. 68.20 ರಷ್ಟು ಮತದಾನವಾಗಿದೆ. ವಾಡಿಕೆಯಂತೆ ಕಲಬುರಗಿ ನಗರದಲ್ಲಿರುವ ಗುಲಬರ್ಗಾ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಮತದಾನ ದಾಖಲಾಗಿದೆ. ಸೇಡಂ ಮತಕ್ಷೇತ್ರವು ಅತೀ ಹೆಚ್ಚು ಮತದಾನಕ್ಕೆ ಭಾಜನವಾಗಿದೆ. ಜಿಲ್ಲೆಯಾದ್ಯಂತ ಕಡಿಮೆ ಮತದಾನವಾಗಲು ಬಿಸಿಲು ಹಾಗೂ ಮತದಾನ ದಿನದಂದು ಅನಿರೀಕ್ಷತವಾಗಿ ಸಾಯಂಕಾಲ ಸುರಿದ ಮಳೆ ಕಾರಣವಾಗಿರಬಹುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಯಾವುದೇ ಪ್ರಕರಣಗಳು ನಡೆದಿಲ್ಲ. ಮತ ಎಣಿಕೆ ಕೇಂದ್ರಕ್ಕೆ ಮೂರು ಹಂತಗಳ ಭದ್ರತೆಯನ್ನು ಕಲ್ಪಿಸಲಾಗಿದೆ ಮೊದಲ ಹಂತವಾಗಿ ಭದ್ರ ಕೊಣೆ ಹತ್ತಿರ ಪ್ಯಾರಾ ಮಿಲಿಟರಿ ತಂಡವನ್ನು, ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಸಶಸ್ತ್ರ ಮೀಸಲು ಪಡೆ ಹಾಗೂ ಸಿವಿಲ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಸುಮಾರು ಪ್ಯಾರಾ ಮಿಲಿಟರಿ, ಸಶಸ್ತ್ರ ಮೀಸಲು ಪಡೆ ಸೇರಿದಂತೆ ಸುಮಾರು 4000 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮತ ಎಣಿಕೆ ಕೇಂದ್ರದ ಭದ್ರತೆಗೆ ನೇಮಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಎನ್.ಐ.ಸಿ. ಅಧಿಕಾರಿ ಸುಧೀಂದ್ರ ಅವಧಾನಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಜೀಜುದ್ದೀನ್ ಉಪಸ್ಥಿತರಿದ್ದರು.
ಮತ ಎಣಿಕೆ: ನಿಷೇಧಾಜ್ಞೆ ಜಾರಿ
****************************
ಕಲಬುರಗಿ,ಮೇ.14.(ಕ.ವಾ.)-ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆ ಕಾರ್ಯ 2018ರ ಮೇ 15 ರಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಕಟ್ಟಡಗಳಲ್ಲಿ ನಡೆಯಲಿದೆ. ಮತ ಎಣಿಕೆ ಹಿನ್ನೆಲೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದ ವ್ಯಾಪ್ತಿಯಲ್ಲಿ ಮೇ 14 ರ ಸಂಜೆ 6 ಗಂಟೆಯಿಂದ ಮೇ 15ರ ಸಂಜೆ 6 ಗಂಟೆಯವರೆಗೆ ಸಿಆರ್.ಪಿ.ಸಿ ಕಾಯ್ದೆ 1973ರ ಕಲಂ 144ರ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಆದೇಶ ಹೊರಡಿಸಿದ್ದಾರೆ.
ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗಡೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದು ಹಾಗೂ ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಕಲ್ಲುಗಳನ್ನು, ಕ್ಷಾರಪದಾರ್ಥ ಇಲ್ಲವೇ ಸ್ಫೋಟಕ ವಸ್ತುಗಳು ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ. ಕಲ್ಲುಗಳನ್ನು ಮತ್ತು ಎಸೆಯುವಂಥಹ ವಸ್ತುಗಳನ್ನು ಎಸೆಯುವ ಅಥವಾ ಬಿಡುವ ಸಾಧನೆಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಮನುಷ್ಯ ಶವಗಳ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳನ್ನು ಪ್ರದರ್ಶನ ಮಾಡುವುದನ್ನು ಪ್ರತಿಬಂಧಿಸಲಾಗಿದೆ. ಸದರಿ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಅಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.
ಮತ ಎಣಿಕೆ ಕೇಂದ್ರ ವ್ಯಾಪ್ತಿಗೊಳಪಡುವ ಅವರಣದಲ್ಲಿ ಮೊಬೈಲ್, ಬೆಂಕಿ ಪಟ್ಟಣ, ಇಂಕ್ ಪೆನ್, ಬೀಡಿ, ಸಿಗರೇಟ್, ಗುಟಕಾ, ತಂಬಾಕು, ನೀರಿನ ಬಾಟಲ್ ಹಾಗೂ ಧಾರಕವಾದ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.
ಸಹ ಶಿಕ್ಷಕಿ ಸುವರ್ಣಲತಾ ಕರ್ತವ್ಯಕ್ಕೆ ಹಾಜರಾಗಲು ಸೂಚನೆ
****************************************************
ಕಲಬುರಗಿ,ಮೇ.14.(ಕ.ವಾ.)-ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಸಿಂಧನಮಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ (ಟಿ.ಜಿ.ಟಿ.) ಸುವರ್ಣಲತಾ ಅವರು 2008ರ ಜನವರಿ 31 ರಿಂದ ಈವರೆಗೆ ಶಾಲಾ ಕರ್ತವ್ಯಕ್ಕೆ ಅನಧೀಕೃತವಾಗಿ ಗೈರು ಹಾಜರಾಗಿರುತ್ತಾರೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ (ಆಡಳಿತ) ಉಪನಿರ್ದೇಶಕರು ತಿಳಿಸಿದ್ದಾರೆ.
ಈಗಾಗಲೇ ಸದರಿ ಸಿಬ್ಬಂದಿಗೆ ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ಸೇಡಂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಮೂರು ನೋಟೀಸು ಜಾರಿ ಮಾಡಲಾಗಿದೆ. ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಅಂತಿಮ ನೋಟೀಸು ಸಹ ಜಾರಿ ಮಾಡಲಾಗಿದ್ದರೂ ಸಹ ಸದರಿ ಸಿಬ್ಬಂದಿಯು ಈವರೆಗೆ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ.
ಸದರಿ ನೌಕರರು ಈ ಪತ್ರಿಕಾ ಪ್ರಕಟಗೊಂಡ 15 ದಿನದೊಳಗಾಗಿ ಸೇಡಂ ತಾಲೂಕಿನ ಸಿಂಧನಮಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಅಂತಿಮ ಅವಕಾಶ ನೀಡಲಾಗಿದೆ. ಒಂದು ವೇಳೆ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಕೆ.ಸಿ.ಎಸ್.ಆರ್. ನಿಯಮಾವಳಿ ಪ್ರಕಾರ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹ ಶಿಕ್ಷಕಿ ಶಕುಂತಲಾ ಕರ್ತವ್ಯಕ್ಕೆ ಹಾಜರಾಗಲು ಸೂಚನೆ
**************************************************
ಕಲಬುರಗಿ,ಮೇ.14.(ಕ.ವಾ.)-ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಶಕುಂತಲಾ ಅವರು 2016ರ ಜನವರಿ 28ರಿಂದ ಈವರೆಗೆ ಶಾಲಾ ಕರ್ತವ್ಯಕ್ಕೆ ಅನಧೀಕೃತವಾಗಿ ಗೈರು ಹಾಜರಾಗಿರುತ್ತಾರೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ (ಆಡಳಿತ) ಉಪನಿರ್ದೇಶಕರು ತಿಳಿಸಿದ್ದಾರೆ.
ಈಗಾಗಲೇ ಸದರಿ ಸಿಬ್ಬಂದಿಗೆ ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ಶಾಲೆಯ ಮುಖ್ಯಗುರುಗಳ ಮೂಲಕ ಮೂರು ನೋಟೀಸು ಜಾರಿ ಮಾಡಲಾಗಿದೆ. ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಅಂತಿಮ ನೋಟೀಸು ಸಹ ಜಾರಿ ಮಾಡಲಾಗಿದ್ದರೂ ಸಹ ಸದರಿ ಸಿಬ್ಬಂದಿಯು ಈವರೆಗೆ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ.
ಸದರಿ ನೌಕರರು ಈ ಪತ್ರಿಕಾ ಪ್ರಕಟಗೊಂಡ 15 ದಿನದೊಳಗಾಗಿ ರಾವೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಅಂತಿಮ ಅವಕಾಶ ನೀಡಲಾಗಿದೆ. ಒಂದು ವೇಳೆ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಕೆ.ಸಿ.ಎಸ್.ಆರ್. ನಿಯಮಾವಳಿ ಪ್ರಕಾರ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
**********************************************************************************
ಫೋಟೋ ಕ್ಯಾಪಶನ್ : ಜಿಲ್ಲಾಧಿಕಾರಿಗಳಾದ ಆರ್. ವೆಂಕಟೇಶಕುಮರ ಅವರು ನಗರದ ಕಾಮರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಇಂದು ಬೆಳಿಗ್ಗೆ ಅಪಘಾತಕ್ಕೆ ಒಳಗಾಗಿರುವ ಅಫಜಲಪುರ ತಹಶೀಲ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮುಸ್ತಾಕ ಅವರ ಆರೋಗ್ಯವನ್ನು ವಿಚಾರಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದಿನ ಯಶೋಧಾ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದರು.
**********************************************************************************

Friday, 11 May 2018

news and photo date: 11-5-2018

ಜಿಲ್ಲೆಯಲ್ಲಿ 21.17 ಲಕ್ಷ ಮತದಾರರಿಗೆ ಮತದಾನದ ಹಕ್ಕು

ಕಲಬುರಗಿ,ಮೇ.11.(ಕ.ವಾ.)-ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 12ರಂದು ನಡೆಯುವ ಚುನಾವಣೆಯಲ್ಲಿ ಒಟ್ಟು 21,17,248 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇವರಲ್ಲಿ 10,73,499 ಪುರುಷರು, 10,43,391 ಮಹಿಳೆಯರು ಹಾಗೂ 358 ಇತರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ. 
34-ಅಫಜಲಪುರ ವಿಧಾನಸಭಾ ಕ್ಷೇತ್ರ: ಒಟ್ಟು 2,20,007 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇವರಲ್ಲಿ 1,12,972 ಪುರುಷರು, 1,07,020 ಮಹಿಳೆಯರು ಹಾಗೂ 15 ಇತರರಿದ್ದಾರೆ. 35-ಜೇವರ್ಗಿ ವಿಧಾನಸಭಾ ಕ್ಷೇತ್ರ: ಒಟ್ಟು 2,34,375 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇವರಲ್ಲಿ 1,17,789 ಪುರುಷರು, 1,16,553 ಮಹಿಳೆಯರು ಹಾಗೂ 33 ಇತರರಿದ್ದಾರೆ.40-ಚಿತ್ತಾಪುರ ವಿಧಾನಸಭಾ ಕ್ಷೇತ್ರ: ಒಟ್ಟು 2,31,920 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇವರಲ್ಲಿ 1,16,529 ಪುರುಷರು, 1,15,357 ಮಹಿಳೆಯರು ಹಾಗೂ 34 ಇತರರಿದ್ದಾರೆ.
41-ಸೇಡಂ ವಿಧಾನಸಭಾ ಕ್ಷೇತ್ರ: ಒಟ್ಟು 2,15,147 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇವರಲ್ಲಿ 1,06,468 ಪುರುಷರು, 1,08,652 ಮಹಿಳೆಯರು ಹಾಗೂ 27 ಇತರರಿದ್ದಾರೆ. 42-ಚಿಂಚೋಳಿ ವಿಧಾನಸಭಾ ಕ್ಷೇತ್ರ: ಒಟ್ಟು 1,93,590 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇವರಲ್ಲಿ 98,615 ಪುರುಷರು, 94,961 ಮಹಿಳೆಯರು ಹಾಗೂ 14 ಇತರರಿದ್ದಾರೆ. 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ: ಒಟ್ಟು 2,50,497 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇವರಲ್ಲಿ 1,29,054 ಪುರುಷರು, 1,21,409 ಮಹಿಳೆಯರು ಹಾಗೂ 34 ಇತರರಿದ್ದಾರೆ.
44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರ: ಒಟ್ಟು 2,63,590 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇವರಲ್ಲಿ 1,31,637 ಪುರುಷರು, 1,31,886 ಮಹಿಳೆಯರು ಹಾಗೂ 67 ಇತರರಿದ್ದಾರೆ. 45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ: ಒಟ್ಟು 2,74,281 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇವರಲ್ಲಿ 1,38,797 ಪುರುಷರು, 1,35,386 ಮಹಿಳೆಯರು ಹಾಗೂ 98 ಇತರರಿದ್ದಾರೆ.46-ಆಳಂದ ವಿಧಾನಸಭಾ ಕ್ಷೇತ್ರ: ಒಟ್ಟು 2,33,841 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇವರಲ್ಲಿ 1,21,638 ಪುರುಷರು, 1,12,167 ಮಹಿಳೆಯರು ಹಾಗೂ 36 ಇತರರಿದ್ದಾರೆ.

ಚುನಾವಣೆಗಾಗಿ 13,360 ಸಿಬ್ಬಂದಿಗಳ ನೇಮಕ 
ಕಲಬುರಗಿ,ಮೇ.11.(ಕ.ವಾ.)-ಜಿಲ್ಲೆಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನಕ್ಕಾಗಿ ಒಟ್ಟು 2384 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 180 ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಚುನಾವಣಾ ಕಾರ್ಯಕ್ಕೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 13,360 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಚುನಾವಣೆಗಾಗಿ ಬಸ್-237, ಮ್ಯಾಕ್ಸಿಕ್ಯಾಬ್-56, ಕ್ರೂಜರ್-568, ಜೀಪು-166 ಸೇರಿದಂತೆ 1027 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ. 
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರದಿಂದ 20 ಪ್ಯಾರಾ ಮಿಲಿಟರಿ ಕಂಪನಿಗಳು, 3 ಆಂಧ್ರಪ್ರದೇಶದ ಎಸ್.ಎ.ಪಿ. ಕಂಪನಿಗಳನ್ನು ನಿಯೋಜಿಸಲಾಗಿದೆ. ಇದಲ್ಲದೇ ಅಲ್ಲದೇ 5 ಕೆ.ಎಸ್.ಆರ್.ಪಿ. ತುಕ್ಕಡಿಗಳು ಹಾಗೂ ಆಂಧ್ರಪ್ರದೇಶ ರಾಜ್ಯದಿಂದ 385 ಹೆಚ್.ಸಿ./ಪಿ.ಸಿ., ತೆಲಂಗಾಣ ರಾಜ್ಯದಿಂದ 500 ಗೃಹ ರಕ್ಷಕ, ಕಲಬುರಗಿ ಜಿಲ್ಲೆಯಿಂದ 774 ಜನ ಗೃಹ ರಕ್ಷಕರನ್ನು ನಿಯೋಜಿಸಲಾಗಿದೆ. ಜಿಲ್ಲೆಯಿಂದ 70 ಜನ ಪೊಲೀಸ್ ಅಧಿಕಾರಿ ಹಾಗೂ 3000 ಪೊಲೀಸ್ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಜಿಲ್ಲೆಯ ಪ್ರತಿಯೊಂದು ಮತಗಟ್ಟೆಯಲ್ಲಿ ಕುಡಿಯುವ ನೀರಿನ ಹಾಗೂ ನೆರಳಿನ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಖಿ ಪಿಂಕ್ ಮತಗಟ್ಟೆಗಳು 
,ಮೇ.11.(ಕ.ವಾ.)-ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೇ 12ರಂದು ಮತದಾನ ನಡೆಯಲಿದೆ. ಮಹಿಳೆಯರನ್ನು ಮತಗಟ್ಟೆಯಡೆಗೆ ಆಕರ್ಷಿಸಿ, ಮತದಾನ ಮಾಡುವಂತೆ ಪ್ರೇರೇಪಿಸಲು ಚುನಾವಣಾ ಆಯೋಗವು ಹಲವಾರು ವಿಶಿಷ್ಟ ಯೋಜನೆಯನ್ನು ಜಾರಿಗೊಳಿಸಿದೆ. ಸಖಿ ಪಿಂಕ್ ಬೂತ್-2018 ಕರ್ನಾಟಕ ಚುನಾವಣೆಯ ವಿಶೇಷ ಆಕರ್ಷಣೆ. ಮಹಿಳಾ ಮತದಾರರು ಹೆಚ್ಚಾಗಿರುವ ಕಡೆಗಳಲ್ಲಿ ಸಖಿ ಪಿಂಕ್ ಬೂತ್‍ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ. 
ಮಹಿಳೆಯರು ಮತದಾನದಿಂದ ಯಾರೂ ವಂಚಿತರಾಗಬಾರದು ಎಂಬುವುದು ಚುನಾವಣಾ ಆಯೋಗದ ಉದ್ದೇಶವಾಗಿದೆ. ಈ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ಇಷ್ಟವಾಗುವ ಆಕರ್ಷಣೆಯ ಪಿಂಕ್ ಬಣ್ಣವನ್ನು ಬಳಸಲಾಗಿದೆ. ಮತಕೇಂದ್ರದ ಬಾಗಿಲು, ಚೌಕಟ್ಟು, ಒಳಗಿನ ಟೇಬಲ್, ಕುರ್ಚಿ, ಮತಗಟ್ಟೆ ಹೀಗೆ ಎಲ್ಲವೂ ಪಿಂಕ್ ಬಣ್ಣದಾಗಿರುತ್ತವೆ. ಮತಕೇಂದ್ರದ ಗೋಡೆಗಳನ್ನ ಪಿಂಕ್ ಬಲೂನುಗಳಿಂದ ಅಲಂಕರಿಸಲಾಗಿದೆ. 
ಈ ಮತಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಮತಗಟ್ಟೆ ಅಧಿಕಾರಿಗಳು ಮಹಿಳೆಯರೇ ಆಗಿರುತ್ತಾರೆ. ಇಲ್ಲಿ ಎಲ್ಲರೂ ಪಿಂಕ್ ಯೂನಿಫಾರ್ಮ ಹಾಕಿಕೊಂಡು ಕಾರ್ಯನಿರ್ವಹಿಸಲಿದ್ದಾರೆ. ಅಷ್ಟೇ ಅಲ್ಲ, ಸುಗಮ ಮತದಾನಕ್ಕೆ ನೆರವಾಗುವ ರಕ್ಷಣೆಗೆ ಮಹಿಳಾ ಭದ್ರತಾ ಸಿಬ್ಬಂದಿಯನ್ನೇ ನಿಯೋಜಿಸಲಾಗಿರುತ್ತದೆ. ಮಹಿಳೆಯರನ್ನು ಮತಗಟ್ಟೆಗೆ ಆಕರ್ಷಿಸುವ ವಿಶಿಷ್ಟ ಪ್ರಯತ್ನ ಇದು. ಅಷ್ಟೇ ಅಲ್ಲ ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸುವ ಯೋಜನೆ ಇದಾಗಿದೆ.

ವಿಧಾನಸಭಾ ಕ್ಷೇತ್ರ, ಮತಗಟ್ಟೆ ಸಂಖ್ಯೆ ಮತ್ತು ಹೆಸರುಗಳ ವಿವರ ಇಂತಿದೆ. 34-ಅಫಜಲಪುರ ಮತಕ್ಷೇತ್ರ:s 163-ಸರ್ಕಾರಿ ಉರ್ದು ಎಚ್.ಪಿ.ಎಸ್. ಎಚ್‍ಕೆಡಿಬಿ ಅಫಜಲಪುರ. 35-ಜೇವರ್ಗಿ ಮತಕ್ಷೇತ್ರ:s 84-ಪಿಎಲ್‍ಡಿ ಬ್ಯಾಂಕ್ ಸ್ಟಾಫ್ ರೂಂ. ಜೇವರ್ಗಿ. 40-ಚಿತ್ತಾಪುರ ಮತಕ್ಷೇತ್ರ:s 69-ಪಿಡಬ್ಲ್ಯೂಡಿ ಆಫೀಸ್ ಚಿತ್ತಾಪುರ. 41-ಸೇಡಂ ಮತಕ್ಷೇತ್ರ:s 109-ಸರ್ಕಾರಿ ಎಚ್‍ಪಿಎಸ್ ನಂ. 2 (ಎಡಭಾಗ) ವಿದ್ಯಾನಗರ ಸೇಡಂ. 42-ಚಿಂಚೋಳಿ ಮತಕ್ಷೇತ್ರ:s 137-ಸರ್ಕಾರಿ ಪಿ.ಯು. ಕಾಲೇಜು (ಬಲಭಾಗ) ಚಂದಾಪುರ. 43-ಗುಲಬರ್ಗಾ ಗ್ರಾಮೀಣ ಮತಕ್ಷೇತ್ರ:s 198-ಸರ್ಕಾರಿ ಎಚ್‍ಪಿಎಸ್ ಕುಸನೂರ-ಹೊಸಕಟ್ಟಡ. 44-ಗುಲಬರ್ಗಾ ದಕ್ಷಿಣ ಮತಕ್ಷೇತ್ರ:s 118-ನೂತನ ವಿದ್ಯಾಲಯ ಕನ್ಹಯ್ಯ ಲಾಲ್ ಮಾಲು ಕಾಮರ್ಸ್ ಕಾಲೇಜ ಡಾ. ಪಾಂಡುರಂಗ ರಾವ್ ಪಟಕಿ ಮೆಮೋರಿಯಲ್ ಸಂಗಮೇಶ್ವರ ಕಾಲೋನಿ ಕಲಬುರಗಿ. 45-ಗುಲಬರ್ಗಾ ಉತ್ತರ ಮತಕ್ಷೇತ್ರ:s 28/ಎ-ತಾಜ್ ಕಾಲೇಜ್ ಆಫ್ ಎಜುಕೇಶನ್ ಆಳಂದ ನಾಕಾ ಕಲಬುರಗಿ. 46-ಆಳಂದ ಮತಕ್ಷೇತ್ರ:s 93-ಸರ್ಕಾರಿ ಪದವಿ ಕಾಲೇಜು (ಬಲಭಾಗ) ಕಲಬುರಗಿ ರಸ್ತೆ ಆಳಂದ.
ಮತ ಎಣಿಕೆ ವೀಕ್ಷಕರ ಬದಲಾವಣೆ
ಕಲಬುರಗಿ,ಮೇ.11.(ಕ.ವಾ.)-ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗವು 46-ಆಳಂದ ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆ ವೀಕ್ಷಕರನ್ನು ಬದಲಾವಣೆ ಮಾಡಿ ನೇಮಕ ಮಾಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ. 
ಬದಲಾವಣೆಯಾದ ಮತ ಎಣಿಕೆ ವೀಕ್ಷಕರ ವಿವರ. 46-ಆಳಂದ ಮತಕ್ಷೇತ್ರದ ಮತ ಎಣಿಕೆ ವೀಕ್ಷಕರಾದ ಪಿ.ಸಿ. ದಾಸ್ ಅವರನ್ನು ನೇಮಕ ಮಾಡಲಾಗಿದೆ. ಅವರಿಗೆ ಲೈಸನ್ ಅಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ರಾಜೇಂದ್ರ ಬಿ. ಅವರನ್ನು ನೇಮಕ ಮಾಡಲಾಗಿದ್ದು, ಅವರ ಮೊಬೈಲ್ ಸಂಖ್ಯೆ 8310048977 ಇರುತ್ತದೆ.

ನಿರ್ಭೀತ ಮತ್ತು ಕಡ್ಡಾಯ ಮತದಾನಕ್ಕೆ ಜಿಲ್ಲಾಧಿಕಾರಿಗಳ ಮನವಿ
ಕಲಬುರಗಿ,ಮೇ.11.(ಕ.ವಾ.)-ಪ್ರÀಜಾಪ್ರÀ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವತ್ರಿಕ ಚುನಾವಣೆಗಳು ಮಹತ್ತರ ಪಾತ್ರ ವಹಿಸುತ್ತವೆ. ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಮತಕ್ಷೇತ್ರಗಳಿಗೆ 2018ರ ಮೇ 12 ರಂದು ಬೆಳಗಿನ 7 ರಿಂದ ಸಂಜೆ 6 ಗಂಟೆಯವರೆಗೆ ಚುನಾವಣಾ ಮತದಾನ ನಡೆಯಲಿದೆ. ಮುಕ್ತ, ನ್ಯಾಯಸಮ್ಮತ, ನಿಷ್ಪಕ್ಷಪಾತ ಹಾಗೂ ಶಾಂತಿಯುತ ಮತದಾನಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರ ಬಂಧುಗಳೇ ಮಹಾಪ್ರಭುಗಳಾಗಿದ್ದಾರೆ. ಇವರ ಮತ ಚಲಾವಣೆಯ ಮೇಲೆಯೇ ಪ್ರಜಾಪ್ರಭುತ್ವ ನೆಲೆಗೊಂಡಿರುತ್ತದೆ. 
ಕಲಬುರಗಿ ಜಿಲ್ಲೆಯ ಎಲ್ಲ ಅರ್ಹ ಮತದಾರರು 2018ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ತಪ್ಪದೇ ಮತ ಚಲಾವಣೆ ಮಾಡಬೇಕು. ಜಿಲ್ಲೆಯ ಪ್ರತಿಯೊಬ್ಬ ಮತದಾರರು ಸಂವಿಧಾನಾತ್ಮಕ ಮತದಾನದ ಹಕ್ಕನ್ನು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ಕಡ್ಡಾಯವಾಗಿ ಚಲಾಯಿಸಬೇಕು. ಮತದಾರರ ನಡೆ ಬೂತ್ ಕಡೆಗೆ ಇರಲಿ. ಪ್ರಜಾಪ್ರಭುತ್ವದ ಬಲವರ್ಧನೆಗೆ ತಪ್ಪದೇ ಮತದಾನ ಮಾಡಿ. ಉತ್ತಮ ಜನಪ್ರತಿನಿಧಿ ಚುನಾಯಿಸಲು ಮತ ನೀಡಿ. ಮತಕ್ಕೆ ಹಣ ಕೊಡುವುದು ಮತ್ತು ಕೇಳೋದು ಅಪರಾಧ. ಜಿಲ್ಲೆಯ ಎಲ್ಲ ಮತಬಾಂಧವರು ಸುಗಮ ಮತ್ತು ಶಾಂತಿಯುತ ಮತದಾನ ಪ್ರಕ್ರಿಯೆಗೆ ಸಹಕರಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಮನವಿ ಮಾಡಿಕೊಂಡಿದ್ದಾರೆ.

 ಮತ ಚಲಾಯಿಸಿ, ಪ್ರಜಾಪ್ರಭುತ್ವದ ಸಂಭ್ರಮದಲ್ಲಿ ಭಾಗಿಯಾಗಿ
ಕಲಬುರಗಿ,ಮೇ.11.(ಕ.ವಾ.)-ಇಂದು ನಡೆಯುವ ಸಾರ್ವತ್ರಿಕ ವಿಧಾನಸಭೆಯ ಚುನಾವಣೆಯ ಮತದಾನದಲ್ಲಿ ಜಿಲ್ಲೆಯ ಪ್ರತಿಯೊಬ್ಬ ಮತದಾರನು ಕಡ್ಡಾಯವಾಗಿ ಮತಗಟ್ಟೆಗೆ ತೆರಳಿ ಉತ್ಸಾಹದಿಂದ ಮತ ಚಲಾಯಿಸುವ ಮೂಲಕ ರಾಷ್ಟ್ರೀಯ ಹಬ್ಬದಂತೆ ಆಚರಿಸಿ ಪ್ರಜಾಪ್ರಭುತ್ವದ ಸಂಭ್ರಮದಲ್ಲಿ ಭಾಗಿಯಾಗಬೇಕು ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವಿಪ್ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೋರ್ಲಪಾಟಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಒಳಗೊಳ್ಳುವ, ನೈತಿಕ, ಸುಗಮ್ಯ ಮತದಾನ ಈ ಬಾರಿ ಚುನಾವಣೆಯ ಘೋಷವಾಕ್ಯವಾಗಿದ್ದು, ಅದರಂತೆ ಜಿಲ್ಲೆಯ ಪ್ರತಿ ಮತಗಟ್ಟೆಯಲ್ಲಿ ಮತದಾರರಿಗೆ ಕುಡಿಯುವ ನೀರು, ರ್ಯಾಂಪ್, ಶೌಚಾಲಯ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸಲು ಚುನಾವಣಾ ಆಯೋಗ ವಿಶೇಷ ಗಮನಹರಿಸಿದೆ. ಇದಲ್ಲದೆ ಈ ಬಾರಿ ವಿಶೇಷವಾಗಿ ದಿವ್ಯಾಂಗರಿಗೆ ರ್ಯಾಂಪ್ ವ್ಯವಸ್ಥೆ ಮತ್ತು ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸಲು “ ಸಖಿ ಪಿಂಕ್ ಬೂತ್” ಸ್ಥಾಪಿಸಲಾಗಿದ್ದು, ದಿವ್ಯಾಂಗ ಮತ್ತು ಮಹಿಳಾ ಮತದಾರರಿಗೆ ಮತದಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. 
ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕಳೆದ ಎರಡು ತಿಂಗಳಿನಿಂದ ಸ್ವೀಪ್ ಸಮಿತಿಯಿಂದ ವಿನೂತನ ಮತ್ತು ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾರರಲ್ಲಿ ಜಾಗೃತಿ ಮತ್ತು ಚುನಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗುವಂತೆ ಪ್ರರೇಪಿಸಲಾಗಿದೆ. ಇದಲ್ಲದೆ  ವಿಶೇಷವಾಗಿ 18 ವರ್ಷ ತುಂಬಿರುವ ಯುವ ಮತದಾರರು, ಮತದಾರ ಪಟ್ಟಿಯಿಂದ ಹೊರ ಉಳಿದವರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಿಂದ ಹಿಡಿದು ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಉಂಟು ಮಾಡಿದೆ ಎಂದರು.
ಮತ ಚಲಾವಣೆ ನಮ್ಮ ಹಕ್ಕು. ದೇಶದ ಪ್ರತಿ ಪ್ರಜೆಗೂ ಸಂವಿಧಾನಬದ್ಧವಾಗಿ ಮತ ಚಲಾವಣೆಗೆ ಅವಕಾಶವಿದೆ. ಹೆಣ್ಣು-ಗಂಡು ಭೇಧವಿಲ್ಲದೆ 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರು ಮತದಾನ ಮಾಡಲು ಅರ್ಹರಿದ್ದಾರೆÉ. ವಿಶ್ವದಲ್ಲಿಯೆ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಮತ್ತು ಶ್ರೇಷ್ಠ ಸಂವಿಧಾನ ಹೊಂದಿರುವ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನು ಪವಿತ್ರವಾದ ಮತದಾನದಲ್ಲಿ ಪಾಲ್ಗೊಂಡಾಗ ಮಾತ್ರ  ದೇಶದ ಗಣತಂತ್ರದ ವ್ಯವಸ್ಥೆ ಮತ್ತಷ್ಟು ಗಟ್ಟಿಯಾಗಲು ಸಾಧ್ಯ ಹೀಗಾಗಿ ಮತದಾರರು ಯಾವುದೇ ಆಮೀಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡುವ ಮೂಲಕ ಈ ದಿನದ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರು ಸಂಭ್ರಮದಿಂದ ಭಾಗಿಯಾಗೋಣ, ಸುಭಧ್ರ ರಾಷ್ಟ್ರ ನಿರ್ಮಿಸುವ ಸಂಕಲ್ಪ ಮಾಡೋಣ. ಮತ ಚಲಾಯಿಸಿ... ಪ್ರಜಾಪ್ರಭುತ್ವ ಗೆಲ್ಲಿಸಿ...
ವಾರ್ತಾ ವಿಶೇಷ:
ಸೂರ್ಯನಗರಿಯಲ್ಲಿ ಕ್ರಿಯಾಶೀಲ ಸ್ವೀಪ್ ಚಟುವಟಿಕೆಗಳ ಆಯೋಜನೆ:
ಮತದಾನ ಪ್ರಮಾಣ ಹೆಚ್ಚಳದ ವಿಶ್ವಾಸ
ಕಲಬುರಗಿ,ಮೇ.11.(ಕ.ವಾ.)-ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ಮತದಾರರಿಗೆ ರಾಜಕೀಯ ಪ್ರಜ್ಞೆ ಮೂಡಿಸಿ ಸಕ್ರೀಯವಾಗಿ ಚುನಾವಣೆ ವ್ಯವಸ್ಥೆಯಲ್ಲಿ ಭಾಗಿಯಾಗುವಂತೆ “ಸ್ವೀಪ್” ಸಮಿತಿಯಿಂದ ಕಲಬುರಗಿ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ವಿನೂತನ, ಕ್ರಿಯಾಶೀಲ ಚಟವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಅರಿವು ಮೂಡಿಸಿದ್ದು, ಕಳೆದ ಬಾರಿಕ್ಕಿಂತ ಮತದಾನ ಪ್ರಮಾಣ ಹೆಚ್ಚಳವಾಗುವ ವಿಶ್ವಾಸವಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೋರ್ಲಪಾಟಿ ತಿಳಿಸಿದ್ದಾರೆ.


ಪ್ರಗತಿಪರ ರಾಷ್ಟ್ರ ನಿರ್ಮಿಸುವಲ್ಲಿ ಮತದಾರರ ಪಾತ್ರ ಅತ್ಯಮೂಲ್ಯವಾಗಿದೆ. 18 ವಯೋಮಾನದ ಯುವ ಮತ್ತು ಚುನಾವಣಾ ಪ್ರಕ್ರಿಯೆಗಳಿಂದ ವಿಮುಖರಾಗಿರುವ ಅನಕ್ಷರಸ್ಥ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವಂತೆ ಪ್ರೇರೇಪಿಸುವುದು, ಯಾವುದೇ ಆಮೀಷಕ್ಕೆ ಒಳಗಾಗದೆ ನೈತಿಕ ಮತದಾನ ಹಾಗೂ ಮತದಾನ ಬಹಿಷ್ಕರಿಸುವಂತಹ ಮತದಾರರನ್ನು ಮನವೊಳಿಸುವಂತಹ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಒಟ್ಟಾರೆ ಮತದಾನದ ಶೇಕಡವಾರು ಪ್ರಮಾಣ ಹೆÉಚ್ಚಿಸುವುದೆ “ಸ್ವೀಪ್” ಕಾರ್ಯ ಯೋಜನೆಯ ಉದ್ದೇಶವಾಗಿದೆ ಎಂದರು.
ಅತ್ಯಂತ ಶಿಸ್ತುಬದ್ಧವಾಗಿ, ವೈಜ್ಞಾನಿಕ, ರಚನಾತ್ಮಕ ಮತ್ತು ಸೃಜನಾತ್ಮಕ ಕಾರ್ಯಕ್ರಮಗಳನ್ನು ವಿಭಿನ್ನ ಶೈಲಿಯ ಕಾರ್ಯಕ್ರಮಗಳ ಕ್ರಿಯಾ ಯೋಜನೆ ಹಾಕಿಕೊಂಡು ಮಾಹಿತಿ, ಅಭಿಪ್ರೇರಣೆ ಮತ್ತು ಸುಳಭಗೊಳಿಸುವಿಕೆ ಹೀಗೆ ಮೂರು ಹಂತಗಳಲ್ಲಿ ಸ್ವೀಪ್ ಚಟುವಟಿಕೆಗಳು ಹಮ್ಮಿಕೊಳ್ಳಲಾಗಿದೆ.
ಯುವ ಮತದಾರರು, ಮಹಿಳೆಯರು, ಕಾರ್ಮಿಕರು, ವಿಕಲಚೇತನರು ಮತ್ತು ಮತದಾನದಿಂದ ವಂಚಿತ ವರ್ಗ ಮತ್ತು ಗುಂಪಿನ ಬಗ್ಗೆ ವಿಶೇಷ ಗಮನಹರಿಸಿ ಈ ವರ್ಗದವರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವರ ಸ್ಥಳಕ್ಕೆ ಹೋಗಿ ವಿವಿಧ ಕ್ರೀಡಾ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಏರ್ಪಾಟು ಮಾಡಲಾಗಿದೆ. ಕರಪತ್ರ-ಪೋಸ್ಟರ್ಸ್ ಹಂಚಿಕೆ, ಬೈಕ್ ರ್ಯಾಲಿ, ಕ್ರೀಡಾಕೂಟ, ವಾಕಥನ್, ಮಾನವ ಸರಪಳಿ ರಚನೆ, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ದಾಖಲೆ ಪ್ರಮಾಣದಲ್ಲಿ ಚುನಾವಣಾ ಲೋಗೋ ರಚನೆ ಹಾಗೂ ಪ್ರತಿಜ್ಞಾ ವಿಧಿ ಬೋಧನೆ, ರೈಲು-ಬಸ್ ನಿಲ್ದಾಣದಲ್ಲಿ ವ್ಯಾಪಕ ಪ್ರಚಾರ, ಕ್ರಿಯಾಶೀಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಳ್ಳಿಗಳಲ್ಲಿ ಪ್ರಭಾತ ಫೇರಿ, ಜಾನಪದ ಸಂಗೀತ-ಬೀದಿ ನಾಟಕ ಆಯೋಜನೆ, ವೈಯಕ್ತಿಕ ಸಮಾಲೋಚನೆ, ಗುಂಪು ಚರ್ಚೆ ಮೂಲಕ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಉತ್ತೇಜಿಸಲಾಗಿದೆ.
ಇದಲ್ಲದೆ ಕಳೆದ 15 ದಿನದಿಂದ ಕೌಂಟ್‍ಡೌನ್ ನಂತೆ ಪ್ರತಿ ದಿನ ಬೈಕ್ ರ್ಯಾಲಿ, ಸೈಕಲ್ ಜಾಥಾ, ಮನೆ-ಮನೆಗೆ ಮತ್ತು ಸಂತೆಗೆ ತೆರಳಿ ಕರಪತ್ರ ಹಂಚಿಕೆ, ಬಸ್‍ಗಳ ಮೇಲೆ ಪೋಸ್ಟರ್ ಅಳವಡಿಕೆ, ಫ್ಯಾಶನ್ ಶೋ ಆಯೋಜನೆ, ತೃತೀಯ ಲಿಂಗಿಗಳಿಂದ ಕ್ಯಾಂಡಲ್ ಮಾರ್ಚ್, ಕಲಬುರಗಿ ಚುನಾವಣಾ ಐಕನ್ ಕಲಾವಿದೆ ಇಂದುಮತಿ ಸಾಲಿಮಥ ಅವರಿಂದ ಹಾಸ್ಯ ಸಂಜೆ ಆಯೋಜನೆ ಹೀಗೆ ವಿಭಿನ್ನ ಚಟುವಟಿಕಗಳು ಹಮ್ಮಿಕೊಳ್ಳುವ ಮೂಲಕ ಮತದಾರರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ. ಪ್ರತಿ ಮತಗಟ್ಟೆವಾರು ವಿವಿಪ್ಯಾಟ್, ಇವಿಎಂ ಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಹೇಳಲಾಗಿದೆ.
ಸ್ವೀಪ್ ಸಮಿತಿಯಿಂದ ಒಂದೇ ದಿನದಲ್ಲಿ ಸುಮಾರು 15000 ಮತದಾರರಿಗೆ ಒಂದೇ ಸ್ಥಳದಲ್ಲಿ ವಿವಿಪ್ಯಾಟ್ ಮತ್ತು ಇವಿಎಂ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ಮತ್ತು ಚುನಾವಣೆ ಗೀತೆಯನ್ನು ಪ್ರಚೂರ ಪಡಿಸಿದ್ದಕ್ಕಾಗಿ ಭಾರತ ಚುನಾವಣಾ ಆಯೋಗವು ಮೆಚ್ಚುಗೆ ವ್ಯಕ್ತಪಡಿಸಿ ತನ್ನ ವೆಬ್‍ಸೈಟ್‍ನಲ್ಲಿ ಅಪಲೋಡ್ ಮಾಡಿರುವುದು ಇದು ಕಲಬುರಗಿ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. 
ಕಲಬುರಗಿ ಜಿಲ್ಲೆಯಲ್ಲಿ ಕಳೆದ ವಿದಾನಸಭೆ ಚುನಾವಣೆಯಲ್ಲಿ ಶೇ.64 ರಷ್ಟು ಮತದಾನವಾಗಿದ್ದು, ಈ ಬಾರಿ ಕನಿಷ್ಠ ಶೇ. 15ರಷ್ಟು ಹೆಚ್ಚಳವಾಗುವ ವಿಶ್ವಾಸ ಸ್ವೀಪ್ ಸಮಿತಿ ಹೊಂದಿದೆ ಎನ್ನುತ್ತಾರೆ ಹೆಪ್ಸಿಬಾರಾಣಿ ಕೋರ್ಲಪಾಟಿ.

Wednesday, 9 May 2018

news and photo Date; 9-5-2018

ಹೋಮಗಾರ್ಡ್ ಮತ್ತು ಸಿ.ಆರ್.ಪಿ.ಎಫ್. ಯೋಧರಿಂದ ಆಕರ್ಷಕ ಪಥಸಂಚಲನ
*****************************************************************
ಕಲಬುರಗಿ,ಮೇ.09.(ಕ.ವಾ.)-ಕಲಬುರಗಿ ಜಿಲ್ಲೆಯಾದ್ಯಂತ ಚುನಾವಣೆಗೆ ನೇಮಿಸಲಾಗಿರುವ ಕಲಬುರಗಿ ಜಿಲ್ಲಾ ಹೋಮಗಾರ್ಡ್, ಸಿ.ಆರ್.ಪಿ.ಎಫ್. ತುಕಡಿಗಳು, ಆಂಧ್ರಪ್ರದೇಶದ ಹೋಮಗಾರ್ಡ ಅವರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪಥಸಂಚಲನದ ಮೂಲಕ ಸಾರ್ವಜನಿಕರಲ್ಲಿ ಚುನಾವಣೆಯಲ್ಲಿ ನಿರ್ಭೀತಿಯಿಂದ ಮತ ಚಲಾಯಿಸುವಂತೆ ಸಂದೇಶ ನೀಡಲಾಯಿತು.
ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿ, ಪೊಲೀಸ್ ಇಲಾಖೆ ಹಾಗೂ ಕಲಬುರಗಿ ಹೋಮಗಾರ್ಡ ವತಿಯಿಂದ ಬುಧವಾರ ಆಯೋಜಿಸಲಾದ ಪಥಸಂಚಲನವು ನಗರದ ಸುಪರ ಮಾರ್ಕೆಟ್‍ನಿಂದ ಪ್ರಾರಂಭವಾಗಿ, ಬಾಂಡೆ ಬಜಾರ ಮಾರ್ಗವಾಗಿ ಹುಮನಾಬಾದ ಬೇಸ್, ಮುಸ್ಲಿಂ ಚೌಕ್, ನ್ಯಾಷನಲ್ ಕಾಲೇಜು, ಸರಾಫ ಬಜಾರದಿಂದ ಮರಳಿ ಸುಪರ ಮಾರ್ಕೆಟ್, ಜಗತ್ತ ಸರ್ಕಲ್‍ನಿಂದ ಪೊಲೀಸ್ ಪರೇಡ್ ಮೈದಾನದಲ್ಲಿ ಕೊನೆಗೊಂಡಿತು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ಈ ಪಥಸಂಚಲನದಲ್ಲಿ ಹೋಮಗಾರ್ಡ, ಸಿಆರ್‍ಪಿಸಿ ಯೋಧರು ಸೇರಿದಂತೆ ಒಟ್ಟು ಸುಮಾರು 1500ಕ್ಕೂ ಹೆಚ್ಚು ಸಮವಸ್ತ್ರ ಧಾರಿಗಳಿಂದ ಪಾಲ್ಗೊಂಡಿದ್ದರು. ಪಥ ಸಂಚಲನ ಮಾರ್ಗದುದ್ದಕ್ಕೂ ಮೇ 12ರಂದು ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ಸ್ವೀಪ್ ಸಮಿತಿಯಿಂದ ಹೊರ ತಂದಿರುವ ಕರಪತ್ರಗಳನ್ನು ಸಹ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹೊಮಗಾರ್ಡ ಕಮಾಂಡಂಟ್ ಸಂತೋಷ ಪಾಟೀಲ, ಸ್ವೀಪ ನೋಡಲ್ ಅಧಿಕಾರಿ ಮೈಸೂರ ಗಿರೀಶ, ಐಪಿಎಸ್ ಪ್ರೊಬೇಷನರಿ ಅಧಿಕಾರಿ ಮಿಥುನ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿಗಳಿಂದ ಮತ ಎಣಿಕೆ ಕೇಂದ್ರ ಸಿದ್ಧತೆ ಪರಿಶೀಲನೆ
******************************************************
ಕಲಬುರಗಿ,ಮೇ.09.(ಕ.ವಾ)-ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ವಿಧಾನಸಭಾ ಚುನಾವಣೆಯ ಮತ ಎಣಿಕೆಗಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಿದ್ಧಪಡಿಸುತ್ತಿರುವ ಮತ ಎಣಿಕೆ ಕೇಂದ್ರಗಳಿಗೆ ಬುಧವಾರ ಭೇಟಿ ನೀಡಿ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿ ಅಗತ್ಯ ಮಾರ್ಪಾಡುಗಳನ್ನು ಸೂಚಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಅಫಜಲಪುರ, ಸಸ್ಯಶಾಸ್ತ್ರ ವಿಭಾಗದಲ್ಲಿ ಚಿಂಚೋಳಿ, ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ತಾಪುರ ಮತ್ತು ಸೇಡಂ, ಕನ್ನಡ ವಿಭಾಗದಲ್ಲಿ ಗುಲಬರ್ಗಾ ಉತ್ತರ ಮತ್ತು ದಕ್ಷಿಣ, ಪರೀಕ್ಷಾಂಗ ವಿಭಾಗದಲ್ಲಿ ಗುಲಬರ್ಗಾ ಗ್ರಾಮೀಣ ಮತ್ತು ಜೇವರ್ಗಿ ಹಾಗೂ ಪರೀಕ್ಷಾ ಭವನದಲ್ಲಿ ಆಳಂದ ಮತಕ್ಷೇತ್ರದ ಮತ ಎಣಿಕೆ ಮಾಡಲು ಮತ ಎಣಿಕಾ ಕೇಂದ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ಪ್ರತಿ ಎಣಿಕೆ ಕೇಂದ್ರದಲ್ಲಿ 14 ಟೇಬಲ್‍ಗಳನ್ನು ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಪ್ರಾಣಿಶಾಸ್ತ್ರ ವಿಭಾಗದಲ್ಲಿ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಿ ಮಾಧ್ಯಮದವರಿಗೆ ಮತ ಎಣಿಕೆಯ ಪ್ರತಿ ಸುತ್ತಿನ ಫಲಿತಾಂಶ ಹಾಗೂ ರಾಜ್ಯದ ಫಲಿತಾಂಶ ಲಭ್ಯವಾಗುವಂತೆ ವ್ಯವಸ್ಥೆ ಮಾಡಲು ತಿಳಿಸಿದರು. ಮಾಧ್ಯಮ ಕೇಂದ್ರದಲ್ಲಿ ಗಣಕಯಂತ್ರಗಳನ್ನು, ಇಂಟರ್‍ನೆಟ್ ಸೌಲಭ್ಯ ಹಾಗೂ ವೈ.ಫೈ. ಸೌಲಭ್ಯ ಕಲ್ಪಿಸಲು ತಿಳಿಸಿದರು.
ಮತ ಎಣಿಕಾ ಕೇಂದ್ರದಲ್ಲಿ ಸ್ಥಾಪಿಸಿರುವ ಬ್ಯಾರಿಕೇಡಿಂಗ್, ಕೌಂಟಿಂಗ್ ಏಜೆಂಟ್‍ರಿಗೆ ಸ್ಥಳ ಪರಿಶೀಲಿಸಿದರು. ಮತದಾನದ ನಂತರ ಎಲೆಕ್ಟ್ರಾನಿಕ್ ಮತಯಂತ್ರ ಹಾಗೂ ವಿ.ವಿ. ಪ್ಯಾಟ್ ಯಂತ್ರ ಸಂಗ್ರಹಿಸಲು ಪ್ರತಿ ಮತಕ್ಷೇತ್ರಗಳಿಗೆ ತಲಾ ಮೂರು ಭದ್ರ ಕೋಣೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಪ್ರತಿಯೊಂದು ಮತ ಎಣಿಕೆ ಕೇಂದ್ರಗಳ ಹತ್ತಿರ ಅಗ್ನಿ ಶಾಮಕ ದಳ ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕಲಬುರಗಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ದಯಾನಂದ ಅಗಸರ್, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಜೀಜುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಭುತ್ವ ಸದೃಢಗೊಳಿಸಲು ಕಡ್ಡಾಯವಾಗಿ ಮತಚಲಾಯಿಸಿ
*********************************************************
ಕಲಬುರಗಿ,ಮೇ.09.(ಕ.ವಾ)-ಪ್ರಜ್ಞಾವಂತ ಮತದಾರರು ಪ್ರಜಾಪ್ರಭುತ್ವ ಸದೃಢಗೊಳಿಸಲು ಎಲ್ಲರೂ ಕೈಜೋಡಿಸಬೇಕು. ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಬೇಕು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕಾನಂದ ತಿಳಿಸಿದರು.
ಅವರು ಬುಧವಾರ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಾಸ್ಯಸಂಜೆ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ನೂರಾರು ವರ್ಷಗಳ ಕಾಲ ಬೇರೆಯವರ ದಾಸ್ಯದಲ್ಲಿದ್ದ ನಮ್ಮ ದೇಶವು ಸ್ವಾತಂತ್ರ್ಯ ಹೊಂದಿ ಪ್ರಜಾಪ್ರಭುತ್ವ ದೇಶವಾಗಿದೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಎಂಬುವುದು ಇನ್ನೂ ಹಸುಗುಸಾಗಿದೆ. ಇದನ್ನು ಎಲ್ಲ ಪ್ರಜ್ಞಾವಂತ ನಾಗರಿಕರು ಕೈಹಿಡಿದು ಬೆಳೆಸಿದಲ್ಲಿ ಮುಂದಿನ ದಿನಗಳಲ್ಲಿ ಎಲ್ಲರೂ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿದ್ಯಾವಂತರೇ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವುದಿಲ್ಲ. ಗ್ರಾಮೀಣ ಪ್ರದೇಶಕ್ಕಿಂತ ವಿದ್ಯಾವಂತರು ಹೆಚ್ಚಿಗೆಯಿರುವ ನಗರ ಪ್ರದೇಶದಲ್ಲಿಯೇ ಮತದಾನದ ಪ್ರಮಾಣ ಕಡಿಮೆಯಾಗುತ್ತದೆ. ವಿದ್ಯಾವಂತರು ಮತದಾನದ ದಿನದಂದು ರಜೆ ಇದ್ದ ಪ್ರಯುಕ್ತ ಯಾವುದೇ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೇ ಕಡ್ಡಾಯವಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕು. ಮತ ಚಲಾಯಿಸುವುದನ್ನು ಸಹ ಸಂಭ್ರಮಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ, ಸೈಕಲ್ ರ್ಯಾಲಿ, ವಾಕಥಾನ್, ಫ್ಯಾಶನ್ ಶೋ, ಕ್ಯಾಂಡಲ್ ಲೈಟ್ ಮಾರ್ಚ, ವಿವಿಧ ಸ್ಪರ್ಧೆಗಳು ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಹಾಸ್ಯಗಾರ್ತಿ ಇಂಧುಮತಿ ಸಾಲಿಮಠ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ, ಹೋಮಗಾರ್ಡ ಕಮಾಂಡಂಟ್ ಸಂತೋಷ ಪಾಟೀಲ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ್ ಯೂಸುಫ್, ಐಪಿಎಸ್ ಪ್ರೊಬೇಷನರಿ ಅಧಿಕಾರಿ ಮಿಥುನ್, ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಮೈಸೂರು ಗಿರೀಶ, ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
12 ದಾಖಲಾತಿಗಳಲ್ಲಿ ಒಂದು ತೋರಿಸಿ ಮತ ಚಲಾಯಿಸಿ
*************************************************
ಕಲಬುರಗಿ,ಮೇ.09.(ಕ.ವಾ.)-ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಲು ಭಾವಚಿತ್ರ ಹೊಂದಿರುವ ಮತದಾರರ ಗುರುತಿನ ಚೀಟಿಯನ್ನು ಹೊಂದಿಲ್ಲದಿದ್ದರೂ ಮತದಾರರು ಚುನಾವಣಾ ಆಯೋಗ ತಿಳಿಸಿದ 12 ಪರ್ಯಾಯ ದಾಖಲಾತಿಗಳಲ್ಲಿ ಒಂದು ದಾಖಲಾತಿಯನ್ನು ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಮೇ 12ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಧಿಯನ್ನು ನಿಗದಿಪಡಿಸಿದೆ. ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರು (ಎಪಿಕ್) ಮತದಾರರ ಗುರುತಿನ ಚೀಟಿ ಬದಲಾಗಿ ತಮ್ಮ ಭಾವಚಿತ್ರವಿರುವ ಕೆಳಕಂಡ 12 ದಾಖಲೆಗಳಲ್ಲಿ ಯಾವುದಾದರೊಂದು ದಾಖಲೆ ಒದಗಿಸಿ ಮತದಾನ ಮಾಡಲು ಭಾರತ ಚುನಾವಣಾ ಆಯೋಗ ಅವಕಾಶ ಕಲ್ಲಿಸಿದೆ. ಈ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ.
1) ಪಾಸ್‍ಪೋರ್ಟ್
2) ಚಾಲನಾ ಪರವಾನಿಗೆ
3) ಕೇಂದ್ರ/ ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಮತ್ತು ಸಾರ್ವಜನಿಕ
ಸ್ವಾಮ್ಯದ ಪಿಎಸ್‍ಯು/ ಪಬ್ಲಿಕ್ ಲಿಮಿಟೆಡ್ ಕಂಪನಿಗಳು ತಮ್ಮ ಸಿಬ್ಬಂದಿಗೆ
ನೀಡಿರುವ ಫೋಟೋ ಗುರುತಿನ ಚೀಟಿಗಳು.
4) ಬ್ಯಾಂಕ್/ ಅಂಚೆ ಕಚೇರಿಯಿಂದ ಭಾವಚಿತ್ರದೊಂದಿಗೆ ನೀಡಲಾಗಿರುವ
ಪಾಸ್‍ಬುಕ್.
5) ಪ್ಯಾನ್ ಕಾರ್ಡ್
6) ಎನ್‍ಪಿಆರ್ ಅಡಿ ಆರ್‍ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್.
7) ಎಂನರೇಗಾ ಬಾಜ್ ಕಾರ್ಡ್.
8) ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ
ಸ್ಮಾರ್ಟ್ ಕಾರ್ಡ್,
9) ಫೋಟೋವುಳ್ಳ ಪಿಂಚಣಿ ದಾಖಲೆ.
10) ಚುನಾವಣಾ ಆಯೋಗದ ವತಿಯಿಂದ ನೀಡುವ ದೃಢೀಕೃತ ಫೋಟೋ ವೋಟರ್
ಸ್ಲಿಪ್ಸ್.
11) ಸಂಸದರು, ವಿಧಾನಸಭಾ, ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ
ಗುರುತಿನ ಚೀಟಿ
12) ಆಧಾರ ಕಾರ್ಡ್.
ಮೇ 10ರಂದು ಮೂರನೇ ಹಂತದ ಖರ್ಚು-ವೆಚ್ಚದ ಪರಿಶೀಲನೆ
*****************************************************
ಕಲಬುರಗಿ,ಮೇ.09.(ಕ.ವಾ.)-ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 35-ಜೇವರ್ಗಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವೆಚ್ಚ ವೀಕ್ಷಕ ಸಾಗರ ಶ್ರೀವಾತ್ಸವ ಅವರು ಜೇವರ್ಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳ ಮೂರನೇ ಹಂತದ ವೆಚ್ಚದ ಪರಿಶೀಲನೆ (ಭಾಗ-ಎ,ಬಿ.ಸಿ.) ಯನ್ನು ಮೇ 10ರಂದು ಜೇವರ್ಗಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮಾಡುವರು.
ಎಲ್ಲ ಅಭ್ಯರ್ಥಿಗಳು ಮೇ 9ರವರೆಗಿನ ಖರ್ಚು ವೆಚ್ಚದ ವಿವರಗಳು, ಬಿಲ್ಲುಗಳು/ ಓಚರಗಳು ಹಾಗೂ ಬ್ಯಾಂಕ್ ಸ್ಟೇಟ್‍ಮೆಂಟ್‍ಗಳೊಂದಿಗೆ ಪರಿಶೀಲನೆಗೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜೇವರ್ಗಿ ಮತಕ್ಷೇತ್ರದ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತಕ್ಷೇತ್ರಗಳಿಗೆ ತೆರಳಲು ವಾಹನ ವ್ಯವಸ್ಥೆ
*************************************
ಕಲಬುರಗಿ,ಮೇ.09.(ಕ.ವಾ.)-ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವ ಪಿ.ಆರ್.ಓ., ಎ.ಪಿ.ಆರ್.ಓ. ಪೋಲಿಂಗ್ ಆಫೀಸರ್‍ಗಳು ಆಯಾ ಮತಕ್ಷೇತ್ರಗಳಿಗೆ ತೆರಳಲು ಜೇವರ್ಗಿ ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ಮೇ 11 ರಂದು ವಾಹನ ವ್ಯವಸ್ಥೆ ಮಾಡಲಾಗಿದೆ.
ಸದರಿ ಅಧಿಕಾರಿ/ ಸಿಬ್ಬಂದಿಗಳು ಮೇ 11 ರಂದು ಮುಂಜಾನೆ 6 ಗಂಟೆಗೆ ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಜರಿದ್ದು, ಆಯಾ ಮತಕ್ಷೇತ್ರಕ್ಕೆ ನಿಗದಿಪಡಿಸಿದ ವಾಹನದಲ್ಲಿ ತೆರಳಲು ಸೂಚಿಸಲಾಗಿದೆ. ನೇಮಕಗೊಂಡ ಸಿಬ್ಬಂದಿಗಳು ತಡವಾಗಿ ಆಗಮಿಸಿದ್ದಲ್ಲಿ ನಿಯುಕ್ತಿಗೊಳಿಸಿದ ಮತಕ್ಷೇತ್ರಗಳಿಗೆ ಆಯಾ ಅಧಿಕಾರಿ/ಸಿಬ್ಬಂದಿಗಳೇ ಮುಂದಿನ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ ಎಂದು 35-ಜೇವರ್ಗಿ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಮತದಾನ ಜಾಗೃತಿಗಾಗಿ ಆಳಂದ
*****************************
ನಾಕಾ-ಶ್ರೀನಿವಾಸ ಸರಡಗಿಯಲ್ಲಿ ಜಾಥಾ ಕಾರ್ಯಕ್ರಮ
***********************************************
ಕಲಬುರಗಿ,ಮೇ.09.(ಕ.ವಾ.)-ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೋಮವಾರ ರಾಜ್ಯ ಮಹಿಳಾ ನಿಲಯದಿಂದ ಆಳಂದ ನಾಕಾವರೆಗೆ ಸ್ವೀಪ್ ಜಾಗೃತಿ ಕಾರ್ಯಕ್ರಮ ಅಂಗವಾಗಿ ಮತದಾನ ಜಾಗೃತಿಗಾಗಿ ಜಾಥಾ ಏರ್ಪಡಿಸಲಾಗಿತ್ತು.
ಈ ಜಾಥಾದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ವಿಜಯಲಕ್ಷ್ಮೀ ಬಿ., ಸುಧಾರಣಾ ಸಂಸ್ಥೆಯ ಅಧೀಕ್ಷಕರು, ನಿಲಯದ ಮಕ್ಕಳು, ಸಿಬ್ಬಂದಿಗಳು ಪಾಲ್ಗೊಂಡು ಜನರಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು.
ಶ್ರೀನಿವಾಸ ಸರಡಗಿಯಲ್ಲಿ ಜಾಥಾ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಲಬುರಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಝನಾಧಿಕಾರಿಗಳ ಕಚೇರಿಯಿಂದ ರವಿವಾರದಂದು ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಮತದಾನ ಜಾಗೃತಿಗಾಗಿ ಸ್ವೀಪ್ ಜಾಗೃತಿ ಕಾರ್ಯಕ್ರಮ ಅಂಗವಾಗಿ ಜಾಥಾ ಏರ್ಪಡಿಸಲಾಗಿತ್ತು. ಈ ಜಾಥಾದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಹಾಗೂ ಮೇಲ್ವಿಚಾರಕಿಯರು ಪಾಲ್ಗೊಂಡು ಜನರಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು.
ಪ್ರಥಮ ಪಿಯುಸಿ ವಿಜ್ಞಾನ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
********************************************************
ಕಲಬುರಗಿ,ಮೇ.09.(ಕ.ವಾ.)-ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ 2018-19ನೇ ಸಾಲಿಗೆ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜು, ಅಫಜಲಪುರ ತಾಲೂಕಿನ ಅರ್ಜುಣಗಿ ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜು ಹಾಗೂ ಚಿತ್ತಾಪುರ ತಾಲೂಕಿನ ಕೊಂಚೂರು ಏಕಲವ್ಯ ಮಾದರಿ ಪದವಿಪೂರ್ವ ಕಾಲೇಜುಗಳಲ್ಲಿ ಪಿಯುಸಿ ಪ್ರಥಮ ವರ್ಷದ ವಿಜ್ಞಾನ ತರಗತಿಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ನಿಗದಿತ ಅರ್ಜಿ ನಮೂನೆಗಳನ್ನು ಆಯಾ ವಸತಿ ಶಾಲೆಗಳಲ್ಲಿ ಅಥವಾ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಮೇ 19ರೊಳಗಾಗಿ ಆಯಾ ವಸತಿ ಶಾಲೆಗಳಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕಲಬುರಗಿ, ಜಿಲ್ಲಾ ಸಮನ್ವಯಾಧಿಕಾರಿಗಳು ಹಾಗೂ ಪ್ರಾಂಶುಪಾಲರನ್ನು ಮೊಬೈಲ್ ಸಂಖ್ಯೆ 9741182727, 9663762201, 9620528262, 9880848047, 9945997714, 9901358968 ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಜವಳಿ ತಂತ್ರಜ್ಞಾನ ಡಿಪ್ಲೋಮಾ ಕೋರ್ಸಿಗಾಗಿ ಅರ್ಜಿ ಆಹ್ವಾನ
*****************************************************
ಕಲಬುರಗಿ,ಮೇ.09.(ಕ.ವಾ.)-2018-19 ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಮೂರು ವರ್ಷದ ಅವಧಿಯ ಡಿಪ್ಲೋಮಾ ಕೋರ್ಸಿನ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲೀಷನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಡಿಪ್ಲೋಮಾ ಪ್ರವೇಶಕ್ಕಾಗಿ 42 ಪುರುಷ/ಮಹಿಳಾ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕದ ಗದಗ-ಬೆಟಗೇರಿಯಲ್ಲಿರುವ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಆಂಧ್ರಪ್ರದೇಶದ ನಲ್ಲೂರಿನ ವೆಂಕಟಗಿರಿಯಲ್ಲಿರುವ ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಹಾಗೂ ಕೇರಳದ ಕಣ್ಣೂರಿನಲ್ಲಿರುವ ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ ತರಬೇತಿ ನೀಡಲಾಗುವುದು. ವ್ಯಾಸಂಗ ಸಮಯದಲ್ಲಿ ಪ್ರತಿ ವಿದ್ಯಾರ್ಥಿಗೆ ಪ್ರತಿ ಮಾಹೆ 1000 ರೂ. ರಿಂದ 1200ರೂ. ಗಳ ಶಿಷ್ಯವೇತನ ನೀಡಲಾಗುವುದು.
ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಕ್ರೂಢೀಕೃತ ಅಂಕಗಳು ಮೆರಿಟ್ ಲೆಕ್ಕಾಚಾರಕ್ಕೆ ಆಧಾರವಾಗಿರುತ್ತದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಡಿ.ಐ.ಸಿ. ಕಟ್ಟಡ, ಜೇವರ್ಗಿ ಕ್ರಾಸ್, ಕಲಬುರಗಿ-585101 ದೂರವಾಣಿ ಸಂಖ್ಯೆ: 08472-278629 ಇವರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ನೇರವಾಗಿ ದಿನಾಂಕ: 08-06-2018.ರೊಳಗಾಗಿ ಪ್ರಾಂಶುಪಾಲರು ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ-ಗದಗ-ಬೆಟಗೇರಿ-582102 ಇವರಿಗೆ ಸಲ್ಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*******************************************
ಕಲಬುರಗಿ,ಮೇ.09.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರ ಉಪ ವಿತರಣಾ ಕೇಂದ್ರದಿಂದ 33/11 ಕೆ.ವಿ. ಹಡಗಿಲ್ ಹಾರೂತಿ ಕೇಂದ್ರದಲ್ಲಿ 12 ಮೀಟರ್ ಐಬಿಎಮ್ ಕಂಬಗಳನ್ನು ಎತ್ತಲು ಹೈಕೋರ್ಟ್ 33/11 ಕೆ.ವಿ. ಜಿಆಯ್ ಸಬ್ ಸ್ಟೇಶನ್ ಲೈನ್‍ನಲ್ಲಿ ಕಾರ್ಯಕೈಗೊಂಡಿರುವ ಪ್ರಯುಕ್ತ ಮೇ 10ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸದರಿ ಉಪ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫೀಡರ್ ವ್ಯಾಪ್ತಿಯ ಗ್ರಾಮ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
33/11ಕೆ.ವಿ. ಹಡಗಿಲ್ ಹಾರೂತಿ ವಿತರಣಾ ಕೇಂದ್ರ: ಎಫ್-5 ಶರಣ ಶಿರಸಗಿ ಎನ್‍ಜೆವಾಯ್ ಹಾಗೂ ಎಫ್-6 ಬಬಲಾದ ಐಪಿ.